ಪ್ರೀ-ರಿಲೀಸ್​ ಈವೆಂಟ್​ಗೆ ಆಗಮಿಸಿದ್ದ ಇಬ್ಬರು ರಾಮ್​ಚರಣ್ ಅಭಿಮಾನಿಗಳ ಸಾವು! 10 ಲಕ್ಷ ರೂ. ನೆರವು ಘೋಷಿಸಿದ ನಿರ್ಮಾಪಕ

dk - 2025-01-07T182043.046 (1)
Published on

ಆಂಧ್ರಪ್ರದೇಶ: ಇದೇ ಜ.4ರಂದು (ಶನಿವಾರ) ರಾತ್ರಿ ರಾಜಮಂಡ್ರಿಯಲ್ಲಿ ನಡೆದ ಗೇಮ್ ಚೇಂಜರ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರು ರಾಮ್ ಚರಣ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ಇಬ್ಬರು ಅಭಿಮಾನಿಗಳನ್ನು ಕಾಕಿಂದದ ಗೈಗೋಳುಪಾಡು ನಿವಾಸಿ ಅರವ ಮಣಿಕಂಠ (23) ಮತ್ತು ತೋಟದ ಚರಣ್ (22) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ವ್ಯಾನ್ ಡಿಕ್ಕಿ ಹೊಡೆದಿದೆ. ಇಬ್ಬರನ್ನೂ ಪೆದ್ದಾಪುರಂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣಾಪಾಯದಿಂದ ಪಾರಾಗಲಿಲ್ಲ. ಈ ಕುರಿತು ರಂಗಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೇಮ್ ಚೇಂಜರ್ ಚಿತ್ರದ ನಿರ್ಮಾಪಕ ದಿಲ್ ರಾಜು ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.ಈ ಕಾರ್ಯಕ್ರದಲ್ಲಿ ರಾಮ್ ಚರಣ್ ಮತ್ತು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಉಪಸ್ಥಿತರಿದ್ದರು.

ರಾಮ್ ಚರಣ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ, ಎರಡು ಕುಟುಂಬಗಳಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ನಾನು ತಕ್ಷಣ ತಲಾ 5 ಲಕ್ಷ ರೂಪಾಯಿಗಳನ್ನು ಕಳುಹಿಸುತ್ತಿದ್ದೇನೆ ಮತ್ತು ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಭರವಸೆ ನೀಡುತ್ತಿದ್ದೇನೆ ಎಂದು ನಿರ್ಮಾಪಕ ದಿಲ್​ ರಾಜು ಹೇಳಿದ್ದಾರೆ.

ಇನ್ನು ರಾಮ್​ ಚರಣ್​ ಮತ್ತು ಪವನ್ ಕಲ್ಯಾಣ್ ಅವರು ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net