

ನವದೆಹಲಿ: ಕರೊನಾ ಕಾರಣ ಜಾಗತಿಕವಾಗಿ ಆರ್ಥಿಕ ಸಂಕಷ್ಟ ಇರುವ ಮಧ್ಯೆಯೇ ಭಾರತದಲ್ಲಿ ಎರಡು ದೊಡ್ಡ ಖಾಸಗಿ ಬ್ಯಾಂಕ್ಗಳ ವಿಲೀನಕ್ಕೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಏಷ್ಯಾದ ಅತಿ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಉದಯ್ ಕೊಟಕ್ ಒಡೆತನದ ಕೊಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್, ಇಂಡಸ್ಇಂಡ್ ಬ್ಯಾಂಕನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕವಾಗಿದೆ.
ಇವೆರಡು ಬ್ಯಾಂಕ್ಗಳ ವಿಲೀನವಾದರೆ ದೇಶದಲ್ಲಿ 8ನೇ ಅತಿ ದೊಡ್ಡ ಬ್ಯಾಂಕ್ ರೂಪುಗೊಳ್ಳಲಿದ್ದು, -ಠಿ; 7 ಲಕ್ಷ ಕೋಟಿ ಮೌಲ್ಯದ ಆಸ್ತಿ ಹೊಂದಲಿವೆ. ಈ ಮೂಲಕ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಕೊಟಕ್ ಮಹಿಂದ್ರಾ-ಇಂಡಸ್ಇಂಡ್ ಬ್ಯಾಂಕ್ ನಾಲ್ಕನೇ ಸ್ಥಾನಕ್ಕೆ ಏರಲಿದೆ. ಇಂಡಸ್ಇಂಡ್ ಬ್ಯಾಂಕ್ ಖರೀದಿ ವಿಷಯದ ಬಗ್ಗೆ ಕೊಟಕ್ ಸಂಸ್ಥೆಯ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊಟಕ್ ಮಹಿಂದ್ರಾ ಮತ್ತು ಇಂಡಸ್ಇಂಡ್ ಬ್ಯಾಂಕ್ ಎರಡೂ ಬ್ಯಾಂಕ್ಗಳ ಮೇಲೂ ವಸೂಲಾಗದ ಸಾಲದ ಹೊರೆ ಶೇ. 3ರ ಆಸುಪಾಸಿನಲ್ಲಿ ಇದೆ. ಆದರೆ, ಇದರಿಂದ ವಿಲೀನಕ್ಕೆ ಹೆಚ್ಚಿನ ಹಾನಿ ಆಗುವುದಿಲ್ಲ. ಎರಡೂ ಬ್ಯಾಂಕ್ಗಳ ಲೆಕ್ಕವನ್ನು ಸುರಕ್ಷಿತವಾಗಿ ನಿರ್ವಹಿಸಿದರೆ ಪ್ರಗತಿದಾಯಕವಾಗಲಿದೆ ಮತ್ತು ಈ ವಿಲೀನದಿಂದ ಕೊಟಕ್ ಮಹಿಂದ್ರಾ ಬ್ಯಾಂಕ್ನ ಠೇವಣಿ ಶೇ. 81 ವೃದ್ಧಿಸಿ 4.70 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದು ತಜ್ಞರು ಅಭಿಪ್ರಾಯಟ್ಟಿದ್ದಾರೆ.