ಇನ್ನಿಬ್ಬರಿಗೆ ನಿಫಾ ಸೋಂಕಿನ ಲಕ್ಷಣ; ಇಬ್ಬರಿಗೂ ಕ್ವಾರಂಟೈನ್

Nipah Virus
Published on

ಕೇರಳ: ಕೋವಿಡ್​ಗಿಂತಲೂ ಮಾರಕ ಎನ್ನಲಾಗಿರುವ ನಿಫಾ ವೈರಸ್ ಸೋಂಕಿನ ಲಕ್ಷಣಕ್ಕೆ ಕೇರಳದಲ್ಲಿ ಇನ್ನಿಬ್ಬರು ಒಳಗಾಗಿದ್ದು, ಅವರಿಬ್ಬರನ್ನೂ ಕ್ವಾರಂಟೈನ್​​ನಲ್ಲಿ ಇಡಲಾಗಿದೆ. ಕೇರಳದ ತಿರುವನಂತಪುರದಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣ ಕಂಡುಬಂದಿರುವ ಇಬ್ಬರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಕ್ವಾರಂಟೈನ್​ಗೆ ಒಳಗಾಗಿರುವವರಲ್ಲಿ ಒಬ್ಬರು ಕೋಜಿಕ್ಕೋಡ್​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಇನ್ನೊಬ್ಬರು ಕಟ್ಟಕ್ಕಡ ನಿವಾಸಿ ಮಹಿಳೆ. ಇವರು ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇಬ್ಬರ ವೈದ್ಯಕೀಯ ಪರೀಕ್ಷೆಯ ಮಾದರಿಗಳನ್ನು ತಿರುವನಂತಪುರದಲ್ಲಿ ಇರುವ ಇನ್​ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ವೈರಾಲಜಿ ಮತ್ತು ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿದೆ.

ಸದ್ಯ ಕೇರಳದಲ್ಲಿನ ನಾಲ್ಕು ಖಚಿತಗೊಂಡಿರುವ ನಿಫಾ ಪ್ರಕರಣಗಳು ಕೊಜಿಕ್ಕೋಡ್ ಜಿಲ್ಲೆಯಲ್ಲೇ ಕಂಡುಬಂದಿವೆ. ಈ ನಾಲ್ವರ ಪೈಕಿ 9 ವರ್ಷದ ಮಗು ಕೃತಕ ಉಸಿರಾಟದಲ್ಲಿದೆ. ಕೇರಳದಲ್ಲಿ ಕೊಜಿಕ್ಕೋಡ್​ನಲ್ಲಿ ಈಗಾಗಲೇ ಇಬ್ಬರು ನಿಫಾ ವೈರಸ್​ಗೆ ಬಲಿಯಾಗಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net