ಕ್ಯಾನ್ಸರ್​ ಪೀಡಿತ ಮಹಿಳೆ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಮೂವರು ಕಾಮುಕರು; ಇಬ್ಬರ ಬಂಧನ

Rape 22 Feb 20
Published on

ಒಡಿಶಾ: ಕ್ಯಾನ್ಸರ್ ಪೀಡಿತ ಮಹಿಳೆ ತನಗಿರುವ ರೋಗ ಗುಣವಾಗಲೆಂದು ಶಿವನಿಗೆ ಪೂಜೆ ಮಾಡುತ್ತಿದ್ದರೆ, ಅಲ್ಲಿಗೆ ಬಂದ ಕಾಮುಕರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಕೇಂದ್ರಪಾರ ಜಿಲ್ಲೆಯ ಕೆರೆಡಗಡ ಹಳ್ಳಿಯಲ್ಲಿ ಬುಧವಾರ ಸಂಜೆ ಘಟನೆ ನಡೆದಿದೆ. ಗರ್ಭಕಂಠದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಹಿಳೆ ಉಪವಾಸ ಮಾಡಿ, ಶಿವನ ಧ್ಯಾನ ಮಾಡುತ್ತಿದ್ದರು. ಸಂಜೆ ಹೊತ್ತು ದೇವಸ್ಥಾನದಲ್ಲಿ ಒಬ್ಬಳೇ ಇದ್ದ ಮಹಿಳೆಯನ್ನು ನೋಡಿದ ಮೂವರು ದುಷ್ಟರು ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಆಗ ಜೋರಾಗಿ ಕೂಗಿಕೊಂಡ ಮಹಿಳೆ ಸಹಾಯಕ್ಕಾಗಿ ಕೂಗಿದ್ದಾರೆ. ಮಹಿಳೆಯ ಅರಚಾಟಕ್ಕೆ ಹೆದರಿದ ಮೂವರೂ ಅಲ್ಲಿಂದ ಪಾರಾಗಿದ್ದಾರೆ.

ಮೂವರು ಆರೋಪಿಗಳಲ್ಲಿ ಇಬ್ಬರನ್ನು ಶುಕ್ರವಾರ ಬಂಧಿಸಿದ್ದು, ಇನ್ನೋರ್ವನಿಗಾಗಿ ಹುಡುಕುತ್ತಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net