ಪಣಂಬೂರು ಬೀಚ್‌ನಲ್ಲಿ ಮತ್ತಿಬ್ಬರ ರಕ್ಷಣೆ

WhatsApp Image 2020-10-18 at 3.52.59 PM
Published on

ಮಂಗಳೂರು: ಪಣಂಬೂರಿನ ಕಡಲತೀರದಲ್ಲಿ ಭಾನುವಾರ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಪಣಂಬೂರು ಬೀಚ್‌ ಅಭಿವೃದ್ಧಿ ಯೋಜನೆಯ ಜೀವರಕ್ಷಕರು ರಕ್ಷಿಸಿದ್ದಾರೆ.
ಭಾನುವಾರವಾದ್ದರಿಂದ ಹೆಚ್ಚು ಮಂದಿ ಕಡಲ ಕಿನಾರೆಗೆ ಆಗಮಿಸಿದ್ದರು. ಮಧ್ಯಾಹ್ನ ವೇಳೆ ನೀರಿಗಿಳಿದಿದ್ದ ಸುಮಾರು ೧೦ ಮಂದಿಯ ಗುಂಪು ಆಟವಾಡುತ್ತಿತ್ತು. ಅವರಲ್ಲಿ ವಿಜಯಪುರದ ಇಟಗಿಯ ಶರಣಪ್ಪ(೩೫) ಹಾಗೂ ಜೋಕಟ್ಟೆಯ ನಾಗರಾಜ ಎಚ್‌.ಎಸ್‌(೧೮) ತೆರೆಯ ಸೆಳೆತಕ್ಕೆ ಸಿಕ್ಕಿ ಅಪಾಯಕ್ಕೀಡಾದರು. ಆದರೆ ಅಲ್ಲಿದ್ದ ಜೀವರಕ್ಷಕರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.

ಶನಿವಾರವೂ ಪಣಂಬೂರು ಬೀಚ್‌ನಲ್ಲಿ ತೆರೆಗೆ ಸಿಲುಕಿದ್ದ ಒಬ್ಬನನ್ನು ರಕ್ಷಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net