ನಿಧಿ ಇದೆ ಎಂದು ಕನಸಲ್ಲಿ ಬಂದು ಹೇಳಿದ ದೇವರು!; ಹಾಗೆಂದು ಕಾಡಲ್ಲಿ ಬಾವಿ ತೋಡಲು ಹೋದರು.. ಆಮೇಲಾಗಿದ್ದೇನು?

Well
Published on

ಉತ್ತರಕನ್ನಡ: ನಿಧಿಯ ಆಸೆಯೇ ಒಂಥರ ವಿಚಿತ್ರ. ನಿಧಿಯನ್ನು ಪಡೆಯುವ ಸಲುವಾಗಿ ಮಾಟ-ಮಂತ್ರ, ತಂತ್ರಗಳಂಥ ಕೆಲಸಗಳಾಗುತ್ತವೆ. ಕೊಲೆಯಂಥ ಪ್ರಕರಣಗಳು ಕೂಡ ನಡೆದಿದ್ದೆ. ಆದರೆ ಇಲ್ಲೊಂದು ಕಡೆ ನಿಧಿ ಇದೆ ಎಂದು ಕನಸಲ್ಲಿ ದೇವರೇ ಹೇಳಿತು ಅಂತ ಒಬ್ಬ ಕಾಡಿನಲ್ಲಿ ಬಾವಿ ತೋಡಲು ಹೋದ ಘಟನೆಯೊಂದು ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಮೀಸಲು ಅರಣ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕಾಡಿನಲ್ಲಿ ಬಾವಿ ತೋಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲಾರಂಭಿಸಿದ್ದಾರೆ. ನಿಧಿಯ ಆಸೆಗೆ ಬಿದ್ದಿದ್ದ ಹಾಗೂ ಬಾವಿ ತೋಡಲು ಆತನಿಗೆ ಸಹಾಯ ಮಾಡುತ್ತಿದ್ದ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

ಸಿಕ್ಕಿಬಿದ್ದವರಲ್ಲಿ ಒಬ್ಬ ವ್ಯಕ್ತಿಗೆ ದೇವರು ಕನಸಿನಲ್ಲಿ ಬಂದು ಇಂಥ ಜಾಗದಲ್ಲಿ ನಿಧಿ ಇದೆ ಎಂದು ಹೇಳಿತ್ತಂತೆ. ಹೀಗಾಗಿ ಆತ ಇನ್ನೊಬ್ಬನ ಸಹಾಯದಿಂದ ಕಾಡಿಗೆ ಹೋಗಿದ್ದು, ಅಲ್ಲಿ ನಾಲ್ಕೈದು ದಿನಗಳಿಂದ ಪೂಜೆ ಮಾಡಿ ಬಾವಿ ತೋಡಲಾರಂಭಿಸಿದ್ದರು. ಅರಣ್ಯಾಧಿಕಾರಿಗಳು ಈ ವಿಷಯ ತಿಳಿದು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಸಿಕ್ಕಿಬಿದ್ದವರ ಹೆಸರು-ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net