ಕೆಎಸ್​ಆರ್​ಟಿಸಿ ಬಸ್​-ಬೈಕ್​ ನಡುವೆ ಡಿಕ್ಕಿ; ಇಬ್ಬರು ಸಾವು

Death 11 Jan 20
Published on

ಕೊಡಗು: ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್​ ನಡುವೆ ಅಪಘಾತ ಉಂಟಾಗಿ ಬೈಕ್​ ಸವಾರರು ಇಬ್ಬರೂ ಮೃತಪಟ್ಟ ದುರ್ಘಟನೆ ಮಡಿಕೇರಿಯ ದೇವರಕೊಲ್ಲಿ ಬಳಿ ನಡೆದಿದೆ.

ರಾಜಸ್ಥಾನದ ಹರ್ನಬ್​ (30) ಮತ್ತು ಪಶ್ಚಿಮಬಂಗಾಳದ ನವೀನ್​ (29) ಮೃತರು. ಇವರಿಬ್ಬರೂ ಬೆಂಗಳೂರಿನ ಬ್ಯಾಂಕ್ ಆಫ್​ ಬರೋಡಾದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಪ್ರವಾಸಕ್ಕೆಂದು ಮಂಗಳೂರಿನಿಂದ ಮಡಿಕೇರಿಗೆ ಆಗಮಿಸುತ್ತಿದ್ದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net