ಸ್ನೇಹಿತನನ್ನು ಕೊಂದು ಆತನ ಮೃತ ದೇಹದೊಂದಿಗೇ ಸೆಕ್ಸ್​!

murder
Published on

ನವದೆಹಲಿ: ಕುಡಿತ ಮನುಷ್ಯನಿಂದ ಏನಾದರೂ ಮಾಡಿಸುತ್ತದೆ ಎನ್ನುವುದನ್ನು ಕೇಳಿರುತ್ತೀರ, ನೋಡಿರುತ್ತೀರ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಘಟನೆಯನ್ನು ಕೇಳಿದರೇ ಕುಡಿತ ಹೀಗೂ ಮಾಡಿಸುತ್ತದಾ ಎಂದು ನೀವು ನಿಬ್ಬೆರಗಾಗುತ್ತೀರಿ.

ಕಂಠಪೂರ್ತಿ ಕುಡಿದು ಜಗಳವಾರಂಭಿಸಿದ ಮೂರು ಸ್ನೇಹಿತರು ಅವರಲ್ಲೇ ಒಬ್ಬನನ್ನು ಕೊಂದಿದ್ದು, ಆತನ ಮೃತ ದೇಹದ ಜತೆ ಲೈಂಗಿಕ ಕ್ರಿಯೆ ನಡೆಸಿರುವ ಘಟನೆ ದಕ್ಷಿಣ ದೆಹಲಿಯ ನೆಬ್​ ಸೆರೈ ನಗರದಲ್ಲಿ ನಡೆದಿದೆ.

ಮಂಗಳವಾರ ಸಂಜೆ ಮೂರು ಸ್ನೇಹಿತರು ಒಬ್ಬಾತನ ಮನೆಯಲ್ಲಿ ಕುಡಿಯುತ್ತಾ ಕುಳಿತಿದ್ದರು. ಕುಡಿದ ಅಮಲು ನೆತ್ತಿಗೇರುತ್ತಿದ್ದಂತೆ ಅವರಲ್ಲಿ ಮಾತಿನ ಚಕಮಕಿ ಶುರುವಾಗಿದ್ದು ಅದು ಜಗಳಕ್ಕೆ ತಿರುಗಿದೆ. ಅದೇ ಮತ್ತಿನಲ್ಲಿ ಇಬ್ಬರು ಸ್ನೇಹಿತರು ಸೇರಿ ಇನ್ನೊಬ್ಬನನ್ನು ಕೊಲೆ ಮಾಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಆರೋಪಿಗಳು ಆತನ ಮೃತ ದೇಹದ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಮೃತನಾದವನ ಮನೆಯಲ್ಲಿಯೇ ಪಾರ್ಟಿ ಮಾಡಿದ್ದರಿಂದಾಗಿ ಮೃತ ದೇಹವನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.

ಬೆಳಗ್ಗೆ ಎಣ್ಣೆಯ ಅಮಲು ಇಳಿದ ನಂತರ ಇಬ್ಬರಿಗೂ ಹಿಂದಿನ ದಿನ ನಡೆದ ಘಟನೆಯ ಅರಿವಾಗಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆ ಮೃತ ದೇಹವನ್ನು ಅಲ್ಲಿಂದ ದೂರ ಸಾಗಿಸಲು ಆತನ ಮನೆಗೆ ಬಂದಿದ್ದಾರೆ. ದೇಹವನ್ನು ಎಳೆದೊಯ್ಯಲು ಪ್ರಯತ್ನಿಸುತ್ತಿದ್ದಾಗ ಸತ್ತವನ ತಂಗಿ ಅದನ್ನು ಗಮನಿಸಿದ್ದು ಅವರಿಬ್ಬರನ್ನು ತಡೆದು ಪ್ರಶ್ನಿಸಿದ್ದಾಳೆ. ತಕ್ಷಣವೇ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದು, ಬಿಹಾರದ ಪಾಟ್ನಾ ನಗರದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.

ಮೃತನ ತಂಗಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು ಬುಧವಾರದಂದು ಪಾಟ್ನಾದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net