ಹಿಂದೂ ಯುವಕರನ್ನು ಮದುವೆಯಾದ ಮುಸ್ಲಿಂ ಯುವತಿಯರು; ನವ ಜೋಡಿಗೆ ರಕ್ಷಣೆಯ ಭರವಸೆ ನೀಡಿದ ಪೊಲೀಸರು!

Love Jihad wedding
Published on

ಉತ್ತರಪ್ರದೇಶ: ಲವ್​ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ, ಹಿಂದೂ ಹುಡುಗಿಯರ ಬ್ರೈನ್ ವಾಷ್ ಮಾಡಿ ಮುಸ್ಲಿಂ ಯುವಕರು ಮದುವೆಯಾಗುತ್ತಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ವಿವಾಹವಾಗಿದ್ದಾರೆ.

ಮದಿನಾಥದಲ್ಲಿರುವ ಅಗಸ್ತ್ಯ ಮುನು ಆಶ್ರಮದಲ್ಲಿ, ಪಂಡಿತ್ ಕೆ.ಕೆ ಶಂಖಧರ್ ಅವರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನೆರವೇರಿದೆ.

ವಿವಾಹದ ನಂತರ ಇಬ್ಬರು ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮುಸ್ಲಿ ಯುವತಿಯರಾದ ಇರಾಮ್ ಜೈದಿ ತನ್ನ ಹೆಸರನ್ನು ಸ್ವಾತಿ ಎಂದು ಬದಲಾಯಿಸಿಕೊಂಡರೆ, ಶಹನಾಜ್ ತನ್ನ ಹೆಸರನ್ನು ಸುಮನ್ ಎಂದು ಬದಲಾಯಿಸಿಕೊಂಡಿದ್ದಾರೆ.

ಇದೀಗ ಇಬ್ಬರು ಯುವತಿಯರು ನಮಗೆ ಹಿಂದೂ ಧರ್ಮದ ಮೇಲೆ ಅಪಾರ ನಂಬಿಕೆ ಇದೆ. ಆದರೆ ಇಸ್ಲಾಂ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸಿಗುವುದಿಲ್ಲ. ಮುಸ್ಲಿಂ ಯುವಕರು ಬಯಸಿದಾಗೆಲ್ಲಾ ತಲಾಖ್ ನೀಡುತ್ತಾರೆ ಎಂದು ಹೇಳಿದ್ದಾರೆ.

ಯುವತಿಯರಾದ ಇರಾಮ್ ಜೈದಿ ಹಾಗೂ ಶಹನಾಜ್ ಅವರು, ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹೆಸರು ಬದಲಾಯಿಸಿಕೊಂಡಿದ್ದಾರೆ. ನಂತರ ವಿವಾಹವಾಗಿ ಹಿರಿಯರ ಆಶೀರ್ವಾದ ಪಡೆದುಕೊಂಡಿದ್ದಾರೆ.

ವಿವಾಹದ ಬಳಿಕ ಸುಮನ್(ಶಹನಾಜ್) ಬರೇಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, ಪೋಷಕರು ನನಗೆ ಸಮಾಧಿ ಸಿದ್ಧಪಡಿಸಿದ್ದಾರೆ. ಇದೀಗ ಸಹೋದರನಿಂದ ಜೀವ ಬೆದರಿಕೆ ಬರುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಮತಾಂತರಗೊಂಡು ವಿವಾಹವಾಗಿರುವ ಇಬ್ಬರು ಯುವತಿಯರಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net