

ಸ್ಯಾನ್ ಡಿಯಾಗೋ : ಎರಡು ಅತ್ಯಾಧುನಿಕ ಬಹುಪಾತ್ರಧಾರಿ(ಮಲ್ಟಿ ರೋಲ್) ಹೆಲಿಕಾಪ್ಟರ್ಗಳು ಇಂದು ಭಾರತೀಯ ನೌಕಾ ದಳಕ್ಕೆ ಸೇರ್ಪಡೆಯಾಗಿವೆ. ಅತ್ಯುನ್ನತ ಗುಣಮಟ್ಟದ ಏವಿಯಾನಿಕ್ಸ್ ಮತ್ತು ಸೆನ್ಸರ್ಗಳನ್ನು ಹೊಂದಿದ ಈ ಹೆಲಿಕಾಪ್ಟರ್ಗಳು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ ಹಲವು ಮಿಷನ್ಗಳನ್ನು ನಿಭಾಯಿಸುವ ವಿಶೇಷ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.
'ಸಿಕೋರ್ಸ್ಕೈ ಎಂಎಚ್-60 ರೋಮಿಯೋ ಹೆಲಿಕಾಪ್ಟರ್'ಗಳನ್ನು ಅಮೆರಿಕದ ನೌಕಾದಳವು, ಭಾರತೀಯ ಅಂಬಾಸಿಡರ್ ತರಂಜಿತ್ ಸಿಂಗ್ ಸಂಧು ಮತ್ತು ಭಾರತೀಯ ನೌಕಾದಳದ ಡೆಪ್ಯುಟಿ ಚೀಫ್ ವೈಸ್ ಅಡ್ಮಿರಲ್ ರವನೀತ್ ಸಿಂಗ್ ಅವರಿಗೆ ಸ್ಯಾನ್ ಡಿಯಗೋದಲ್ಲಿ ಔಪಚಾರಿಕವಾಗಿ ಹಸ್ತಾಂತರಿಸಿತು.
ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಕಾರ್ಪೊರೇಷನ್ ಉತ್ಪಾದಿಸುತ್ತಿರುವ ಈ ಎಂಎಚ್-60ಆರ್ ಮಾದರಿಯ 24 ಹೆಲಿಕಾಪ್ಟರ್ಗಳನ್ನು ಫಾರಿನ್ ಮಿಲಿಟರಿ ಸೇಲ್ಸ್ನಡಿ ಅಮೆರಿಕ ಸರ್ಕಾರದಿಂದ ಖರೀದಿಸಲಾಗುತ್ತಿದೆ. ಭಾರತದಲ್ಲಿ ಹಲವು ವಿಶಿಷ್ಟ ಉಪಕರಣ ಮತ್ತು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸಲ್ಪಡುವ ಈ ಹೆಲಿಕಾಪ್ಟರ್ಗಳು, ಭಾರತೀಯ ನೌಕಾದಳದ 3ಡಿ ಸಾಮರ್ಥ್ಯಗಳನ್ನು ಇನ್ನೂ ಹೆಚ್ಚಿಸಲಿವೆ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)