More

    ಪ್ರಧಾನಿ ಮೋದಿ ಜೊತೆ ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್​ ಮಾತುಕತೆ!

    ನವದೆಹಲಿ : ರಾಜ್ಯಸಭಾ ಸದಸ್ಯ ಹಾಗೂ ನಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ(ಎನ್​ಸಿಪಿ) ಅಧ್ಯಕ್ಷ ಶರದ್​ ಪವಾರ್​ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಮೋದಿ ಮತ್ತು ಪವಾರ್​ ನಡುವೆ ಸುಮಾರು 50 ನಿಮಿಷಗಳ ಮಾತುಕತೆ ನಡೆಯಿತು ಎನ್ನಲಾಗಿದ್ದು, ಈ ಸಭೆಯ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.

    ಕೆಲವು ಸಮಯದಿಂದ ಪವಾರ್​, ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಅಪೇಕ್ಷೆ ಹೊಂದಿದ್ದು, ಇಂದು ಅದಕ್ಕೆ ಕಾಲ ಕೂಡಿಬಂದಿತು ಎನ್ನಲಾಗಿದೆ. ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಎರಡು ದಿನಗಳ ಮುನ್ನ ಈ ಭೇಟಿ ನಡೆದಿದೆ.

    ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ರಾಜ್ಯಪಾಲರ ಮೊರೆ ಹೋದ ಸಂಸದೆ ಸುಮಲತಾ

    ಜೊತೆಗೆ ಮಹಾರಾಷ್ಟ್ರದಲ್ಲಿ ಎನ್​ಸಿಪಿ ಮತ್ತು ಶಿವಸೇನೆಯೊಂದಿಗಿನ ನಂಟಿನಲ್ಲಿ ಭಿನ್ನಾಭಿಪ್ರಾಯ ತೋರಿಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಶರದ್​ ಪವಾರ್​ ಅವರು ಅಭ್ಯರ್ಥಿ ಆಗಬಹುದೆಂಬ ಊಹೆಗಳೂ ಇತ್ತೀಚೆಗೆ ಮೂಡಿಬಂದಿದ್ದವು.

    ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಎನ್​ಸಿಪಿಯ ಮುಖ್ಯಸ್ಥರಾಗಿರುವ ಪವಾರ್, ನೂತನವಾಗಿ ರಚಿಸಲಾಗಿರುವ ಕೇಂದ್ರ ಸಹಕಾರ ಸಚಿವಾಲಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಹಾಗೂ ರೈತರ ವಿಚಾರಗಳನ್ನು ಪ್ರಧಾನಿಯೊಂದಿಗೆ ಚರ್ಚೆ ಮಾಡಿದರು ಎಂದು ಎನ್​ಸಿಪಿ ಮೂಲಗಳು ಹೇಳಿವೆ. ಸಹಕಾರಿ ಕ್ಷೇತ್ರದಲ್ಲಿ ಕಾನೂನು ರಚಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದು, ಕೇಂದ್ರದಲ್ಲಿ ಸಹಕಾರ ಸಚಿವಾಲಯ ಮಾಡುವುದು ಸಂವಿಧಾನದ ಉಲ್ಲಂಘನೆಯಾದೀತೆಂದು ಪವಾರ್​ ಇತ್ತೀಚೆಗೆ ಮೋದಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    ಒಲಂಪಿಕ್ಸ್​ಗೆ ಹೊರಟಿತು ಆಟಗಾರರ ತಂಡ; ಇಂದು ದೆಹಲಿಯಲ್ಲಿ ಬೀಳ್ಕೊಡುಗೆ

    ಎಸ್ಸೆಸ್ಸೆಲ್ಸಿ ಎಕ್ಸಾಂ ಬರೆಯಲು ಹೋಗುವ ಮುನ್ನ, ನಿಮಗಿದು ತಿಳಿದಿರಲಿ!

    ಮತ್ತೆ ಏರಿದ ಪೆಟ್ರೋಲ್​ ಬೆಲೆ! ಡೀಸೆಲ್ ಬೆಲೆ ತಟಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts