ಗೋವಾಗೆ ಇನ್ನೆರಡು ಪೊಲೀಸ್​ ಸೂಪರಿಂಟೆಂಡೆಂಟ್; ಕಾರಣ..?

police medals
Published on

ಪಣಜಿ: ಪ್ರವಾಸಿಗರ ಹಾಟ್​ಸ್ಪಾಟ್​, ಮೋಜು-ಮಸ್ತಿಗರ ನೆಚ್ಚಿನ ತಾಣ ಆಗಿರುವ ಗೋವಾದಲ್ಲಿ ಇನ್ನೆರಡು ಪೊಲೀಸ್​ ಸೂಪರಿಂಟೆಂಡೆಂಟ್​​ಗಳ ನಿಯೋಜನೆ ಆಗಲಿದೆ. ರಾಜ್ಯದಲ್ಲಿ ಎರಡಿದ್ದ ಎಸ್​​ಪಿಗಳ ಸಂಖ್ಯೆ ಈ ಮೂಲಕ ನಾಲ್ಕಕ್ಕೆ ಏರಲಿದೆ.

ಪ್ರವಾಸಿಗರಿಗೆ ಸಂಬಂಧಿಸಿದಂತೆ ಅಪರಾಧಗಳನ್ನು ನಿಯಂತ್ರಿಸಲು, ಅಲ್ಲದೆ ನಿರಂತರವಾಗಿ ಆಗಮಿಸುವ ವಿವಿಐಪಿಗಳ ಸುರಕ್ಷೆ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿದ್ದ ಎರಡು ಪೊಲೀಸ್ ಜಿಲ್ಲೆಗಳನ್ನು ವಿಭಜಿಸಿ ಒಟ್ಟು ನಾಲ್ಕು ಪೊಲೀಸ್​ ಜಿಲ್ಲೆಗಳನ್ನಾಗಿಸಿದೆ.

ಗೋವಾ ಸರ್ಕಾರ ಎರಡಿದ್ದ ಪೊಲೀಸ್ ಜಿಲ್ಲೆಗಳನ್ನು ನಾಲ್ಕಾಗಿಸಲು ನಿರ್ಧರಿಸಿದೆ. ಇದರಿಂದ ಉತ್ತಮ ಹಾಗೂ ಪರಿಣಾಮಕಾರಿ ಕಾನೂನು ವ್ಯವಸ್ಥೆ ಉಂಟಾಗಿಸುವ ಜತೆಗೆ ಅಪರಾಧಗಳನ್ನೂ ನಿಯಂತ್ರಿಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಪ್ರಸ್ತುತ ಗೋವಾದಲ್ಲಿ ಉತ್ತರ ಗೋವಾ ಹಾಗೂ ದಕ್ಷಿಣ ಗೋವಾ ಎಂದು ಎರಡು ಪೊಲೀಸ್ ಜಿಲ್ಲೆಗಳಿದ್ದು, ಇದೀಗ ಎರಡನ್ನೂ ವಿಭಜಿಸಿ ಕ್ರಮವಾಗಿ ಮಪುಸ ಮತ್ತು ಪಾಂಡಾ ಎಂದು ಮತ್ತೆರಡು ಪೊಲೀಸ್ ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net