ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಇಬ್ಬರ ಎನ್​ಕೌಂಟರ್​; ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದವರ ನೆಲಕ್ಕುರುಳಿಸಿದ ದೆಹಲಿ ಪೊಲೀಸ್​

DEHLI ENCOUNTER
Published on

ನವದೆಹಲಿ: ಇಂದು ಬೆಳಗ್ಗೆ 5 ಗಂಟೆಗೆ ದೆಹಲಿಯಲ್ಲಿ ಇಬ್ಬರು ಖದೀಮರನ್ನು ಎನ್​ಕೌಂಟರ್​ ಮಾಡಲಾಗಿದೆ. ದೆಹಲಿಯ ಪುಲ್ ಪ್ರಹ್ಲಾದಪುರ್ ಎಂಬಲ್ಲಿ ಗುಂಡು ಹೊಡೆಯಲಾಗಿದೆ.

ರಾಜ ಖುರೇಶಿ ಮತ್ತು ರಮೇಶ್​ ಬಹದ್ದೂರ್​ ಎಂಬುವವರು ಎನ್​ಕೌಂಟರ್​ನಲ್ಲಿ ಮೃತಪಟ್ಟವರು. ಆರಂಭದಲ್ಲಿ ಪೊಲೀಸ್​ ಮತ್ತು ಕಳ್ಳರ ನಡುವೆ ಗುಂಡಿನ ಚಕಮಕಿ ನಡೆದಿದೆ. ಎರಡು ಕಡೆಯಿಂದ 30 ಸುತ್ತಿನ ಗುಂಡಿನ ದಾಳಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಕಳ್ಳರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿನ ವೈದ್ಯರು ಅವರಿಬ್ಬರು ಮೃತ ಪಟ್ಟಿದ್ದಾರೆ ಎಂದು ದೃಢಪಡಿಸಿದರು ಎಂದು ಡಿಸಿಪಿ ಪಿ.ಎಸ್. ಕುಷ್ವಾ ತಿಳಿಸಿದರು.

ಎನ್​ಕೌಂಟರ್​ನಲ್ಲಿ ಮೃತ ಪಟ್ಟ ಇಬ್ಬರ ಮೇಲೆ ದರೋಡೆ ಮತ್ತು ಕೊಲೆ ಆರೋಪದಲ್ಲಿ ಬೇಕಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net