ಮೀನು ಹಿಡಿಯಲು ಹೋದವರು ಮರಳಲೇ ಇಲ್ಲ; ನೀರಿನ ರೂಪದಲ್ಲಿ ಎದುರಾದ ಜವರಾಯ

kere
Published on

ಹಾಸನ: ಸಾವು ಯಾವಾಗ ಹೇಗೆ ಬಂದೆರಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೀನು ಹಿಡಿದುಕೊಂಡು ಬರಲು ಕೆರೆಗೆ ಹೋದವರು ನೀರುಪಾಲಾಗಿ, ಬಾರದ ಲೋಕಕ್ಕೆ ಹೋಗಿರುವ ದಾರುಣ ಘಟನೆ ವರದಿಯಾಗಿದೆ. ಈ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

32 ವರ್ಷದ ಮಂಜುನಾಥ್ ಮತ್ತು 33 ವರ್ಷದ ಪ್ರತಾಪ್ ಮೃತ ದುರ್ದೈವಿಗಳು.

ಈರ್ವರೂ ತಡರಾತ್ರಿ ಗ್ರಾಮದ ಹೊಸಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಆಗ ಆಯತಪ್ಪಿ ನೀರಿಗೆ ಬಿದ್ದು ಕೆರೆಯಲ್ಲಿ ಮುಳುಗಿ ಸಾವಪ್ಪಿದ್ದಾರೆ ಎನ್ನಲಾಗಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಗ್ನಿಶಾಮಕದಳದವರು ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net