

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ರನ್ನು ಬಂಧಿಸಲಾಗಿರುವ ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಕೇಸಿನ ತನಿಖೆಯ ಮುಂದಾಳತ್ವ ವಹಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ)ದ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಹಲವು ಆರೋಪಗಳಿಗೆ ತುತ್ತಾಗಿದ್ದಾರೆ. ಇದೀಗ ಅವರ ಬಗ್ಗೆ ಹತ್ತು ವರ್ಷದ ಹಿಂದಿನ ಮತ್ತೊಂದು ವಿಷಯ ಜಾಹೀರಾಗಿದೆ.
2011 ನೇ ಇಸವಿಯಲ್ಲಿ ವಾಂಖೇಡೆ ಅವರು ಕಸ್ಟಮ್ಸ್ ಸಹಾಯಕ ಕಮಿಷನರ್ ಆಗಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ರನ್ನು ತಡೆಹಿಡಿದಿದ್ದರು. ಸುಮಾರು 20 ಬ್ಯಾಗ್ಗಳನ್ನು ಹೊತ್ತು ತಂದಿದ್ದ ಶಾರುಖ್ರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಲಾಗಿತ್ತು. ತದನಂತರ 1.5 ಲಕ್ಷ ರೂಪಾಯಿ ಕಸ್ಟಮ್ಸ್ ಡ್ಯೂಟಿ ಕಟ್ಟಲು ಹೇಳಿ ಅವರನ್ನು ಹೋಗಲು ಬಿಡಲಾಗಿತ್ತು ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)