ನದಿಯಲ್ಲಿ ಮೀನು ಹಿಡಿಯಲು ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ

kali
Published on

ದಾಂಡೇಲಿ: ನದಿಯಲ್ಲಿ ಮೀನು ಹಿಡಿಯಲು ಹೋದ ಬಾಲಕನನ್ನು ಮೊಸಳೆಯೊಂದು ಎಳೆದೊಯ್ದಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿತ್ತು. ಎರಡು ದಿನಗಳಿಂದ ಅವನ ಶೋಧ ನಡೆಸುತ್ತಿದ್ದ ಅರಣ್ಯ ರಕ್ಷಕರು ಮತ್ತು ಸ್ಥಳೀಯರಿಗೆ ಇಂದು ಆತನ ಶವ ಸಿಕ್ಕಿದೆ.

15 ವರ್ಷದ ಮೊಹಿನ್ ಮೆಹಬೂಬ್ ಅಲಿ ಗುಲ್ಬರ್ಗಾ ಮೃತ ದುರ್ದೈವಿ. ಮೃತ ಬಾಲಕನ ಕೈಕಾಲುಗಳು ನೀರಿನಲ್ಲಿ ನೆಂದು ಬೆಳ್ಳಗಾಗಿದ್ದರೆ, ಬಾಲಕನ ಎಡಗೈಯನ್ನು ಮೊಸಳೆ ಕಡಿದುಹಾಕಿದೆ.

ದಾಂಡೇಲಿಯ ವಿನಾಯಕನಗರದಲ್ಲಿ ಭಾನುವಾರ ಮಧ್ಯಾಹ್ನ ಕಾಳಿ ನದಿ ದಂಡೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಅಲಿಯ ಮೇಲೆ ಮೊಸಳೆ ದಾಳಿ ಮಾಡಿ, ಎಳೆದೊಯ್ದಿತ್ತು. ಬಾಲಕನಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ನದಿಯಲ್ಲಿ ಶೋಧ ನಡೆಸುತ್ತಿದ್ದರು. ಎರಡು ದಿನಗಳ ಬಳಿಕ ಬಾಲಕನ ಶವವು ನದಿಯಲ್ಲಿ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net