More

    ಇದು ಜಗತ್ತಿನ ಮೊದಲ ಸ್ಟ್ಯಾಂಪ್​ ಅಂತೆ! ಇದರ ಬೆಲೆ ಎಷ್ಟು ಗೊತ್ತೇ?

    ಲಂಡನ್​: ಜಗತ್ತಿನ ಮೊದಲ ಅಂಚೆ ಚೀಟಿ ಎನ್ನಲಾದ ‘ಪೆನ್ನಿ ಬ್ಲ್ಯಾಕ್​​’ನ ಒಂದು ಪ್ರತಿಯ ಹರಾಜಿಗೆ ಅಮೆರಿಕದ ಬಹುರಾಷ್ಟ್ರೀಯ ಸೊತೆಬೀಸ್​ ಫೈನ್​ ಆರ್ಟ್ಸ್​ ಕಂಪೆನಿ ಮುಂದಾಗಿದೆ. ಹರಾಜಿಗೆ ಒಡ್ಡುವುದಕ್ಕೂ ಮುನ್ನ ಅ.19 ರಂದು ಲಂಡನ್​ನಲ್ಲಿ ಪ್ರದರ್ಶನಗೊಂಡ ಈ ಪೋಸ್ಟೇಜ್​​ ಸ್ಟ್ಯಾಂಪ್​ನ ಬೆಲೆ ಸುಮಾರು 8.25 ಮಿಲಿಯನ್​ ಡಾಲರ್​ಗಳು(62 ಕೋಟಿ ರೂಪಾಯಿ) ಎನ್ನಲಾಗಿದೆ.

    ಡಿಸೆಂಬರ್​ 7 ಕ್ಕೆ ಸೊತೆಬೀಸ್​ ಆಯೋಜಿಸಿರುವ ಟ್ರೆಷರ್ಸ್​​ ಸೇಲ್​ನಲ್ಲಿ ಈ 1840ನೇ ಇಸವಿಯ ಸ್ಟ್ಯಾಂಪ್​ ಕೂಡ ಒಂದಾಗಿದೆ. ಬ್ರಿಟೀಷ್​ ರಾಣಿ ವಿಕ್ಟೋರಿಯಾರ ಚಿತ್ರವಿರುವ ಈ ಪೋಸ್ಟೇಜ್​ ಸ್ಟ್ಯಾಂಪನ್ನು ಜಾರಿಗೆ ತರುವ ಮುನ್ನ ಕಾಗದ ಪಡೆಯುವವರೇ ಅಂಚೆ ವೆಚ್ಚವನ್ನು ಭರಿಸುವ ಪದ್ಧತಿ ಇತ್ತು ಎನ್ನಲಾಗಿದೆ.

    ಇದನ್ನೂ ಓದಿ: ಅಮಾನ್ಯೀಕರಣ ನೋಟುಗಳನ್ನು ಕಲರ್​ ಜೆರಾಕ್ಸ್​ ಮಾಡಿ ಬದಲಾವಣೆ ಮಾಡ್ತಿದ್ದ ಖತರ್ನಾಕ್​ ಗ್ಯಾಂಗ್​ ಬಂಧನ

    ಈ ಸ್ಟ್ಯಾಂಪ್​ ಸ್ಕಾಟಿಶ್​ ರಾಜಕಾರಣಿ ರಾಬರ್ಟ್​ ವಾಲೇಸ್​ರ ಹಳೆಯ ದಾಖಲಾತಿಯೊಂದಕ್ಕೆ ಲಗತ್ತಿಸಲ್ಪಟ್ಟಿದೆ. ವಿಶೇಷವಾಗಿ ಅಂಚೆಚೀಟಿಗಳನ್ನು ಸಂಗ್ರಹಿಸುವವರಿಗೆ ಬಹು ಅಮೂಲ್ಯವಾದ ಸಂಗ್ರಹವಾಗಬಲ್ಲ ಪೆನ್ನಿ ಬ್ಲ್ಯಾಕ್, ಅಂಚೆ ಚೀಟಿಗಳ ಇತಿಹಾಸದ ಬಹುಮಹತ್ವದ ಭಾಗವಾಗಿದೆ ಎಂದು ಸೊತೆಬೀಸ್​ನ ಮಾರಾಟ ಮುಖ್ಯಸ್ಥ ಹೆನ್ರಿ ಹೌಸ್​ ಹೇಳಿದ್ದಾರೆ. (ಏಜೆನ್ಸೀಸ್)

    ಕ್ರಿಕೆಟ್​ ಬೆಟ್ಟಿಂಗ್​, ಜೂಜಿನಲ್ಲಿ ಹಣ ಕಳೆದ; ಸಾಲಬಾಧೆ ತಾಳದೆ ಸಾವಿಗೆ ಶರಣಾದ

    ಆರ್ಯನ್​ ಖಾನ್​ ಕೇಸಲ್ಲಿ 25 ಕೋಟಿ ರೂ. ವಸೂಲಿ ಆರೋಪ; ಎನ್​ಸಿಬಿ ಅಧಿಕಾರಿ ವಿರುದ್ಧ ತನಿಖೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts