ಯುವತಿ ಮೇಲೆ ಆಸಿಡ್​ ಎರಚಿದ ಕಿರಾತಕರು

Acide
Published on

ಪಾಟ್ನಾ: ಬೈಕ್​​ ಮೇಲೆ ಬಂದ ಇಬ್ಬರು ಏಕಾಏಕಿ ಯುವತಿಯ ಮೇಲೆ ಆಸಿಡ್​ ದಾಳಿ ನಡೆಸಿ ಪೈಶಾಚಿಕ ಕೃತ್ಯವೆಸಗಿದ್ದಾರೆ.

ಬಿಹಾರದ ರೋಹಟಕ್​​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಿಲ್ಪ ಕುಮಾರಿ ಎಂಬ ಯುವತಿ ತನ್ನ ಅಣ್ಣನ ಜತೆಗೆ ಕುಟುಂಬಸ್ಥರ ಮನೆಗೆ ತೆರಳುತ್ತಿದ್ದ ವೇಳೆ ಹೆಲ್ಮಟ್​ ಧರಿಸಿದ್ದ ಇಬ್ಬರು, ಯುವತಿಯ ಮೇಲೆ ಆಸಿಡ್​ ಎರಚಿ ಪರಾರಿಯಾಗಿದ್ದಾರೆ.

ದಾಳಿಯಿಂದ ಯುವತಿಯ ಮುಖದ ಅರ್ಧ ಭಾಗ ಸುಟ್ಟುಹೋಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net