ದಕ್ಷಿಣ ಆಫ್ರಿಕಾದ ಭೀಕರ ಪ್ರವಾಹಕ್ಕೆ 440 ಮಂದಿ ಬಲಿ

South Africa flood
Published on

ದರ್ಬನ್​: ದಕ್ಷಿಣ ಆಫ್ರಿಕಾದ ದರ್ಬನ್​ನಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ 440ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

ಕಳೆದ ವಾರ ಸಂಭವಿಸಿರುವ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಹಲವು ಸಾವು-ನೋವು ಸಂಭವಿಸಿದೆ. ಇನ್ನೂ ಮಳೆ ಮುಂದುವರಿದಿದ್ದು, ಮತ್ತೆ ಪ್ರವಾಹ ಭೀತಿ ಇದೆ ಎಂದು ಇಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

ಭಾರೀ ಬಿರುಗಾಳಿಗೆ ಮನೆಗಳು ಕೊಚ್ಚಿಹೋಗಿದ್ದು, ರಸ್ತೆ, ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ. ಜನರು ಆಹಾರವಿಲ್ಲದೇ ಪರದಾಡುವಂತಾಗಿದೆ. 2019ರಲ್ಲಿ ಸಂಭವಿಸಿದ ಪ್ರವಾಹದಲ್ಲಿ 88ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net