ಇಬ್ಬರಿಗೆ ನ್ಯಾಯಾಂಗ ಬಂಧನ, ಒರ್ವ ಪೊಲೀಸ್ ಕಸ್ಟಡಿಗೆ

crime
Published on

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಒಬ್ಬ ಆರೋಪಿಯನ್ನು ಮತ್ತೆ ಪೊಲೀಸ್ ವಶಕ್ಕೆ ನೀಡಿ ನಗರದ ೩೯ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಪೊಲೀಸ್ ಕಸ್ಟಡಿಯ ಅವಧಿ ಬುಧವಾರ ಅಂತ್ಯವಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇದರಲ್ಲಿ ಆರೋಪಿ ಮೊಹಮ್ಮದ್ ಶಫಿ ನಾಶಿಪುಡಿಯನ್ನು ೧ ದಿನ ಪೊಲೀಸ್ ಕಸ್ಟಡಿಗೆ ನೀಡಿ ಮುನಾವರ್ ಹಾಗೂ ಇಲ್ತಾಜ್ಗೆ ನ್ಯಾಯಾಂಗ ಬಂಧನ ಆದೇಶಿಸಲಾಗಿದೆ. ವಿಧಾನಸೌಧ ಠಾಣೆ ಪೊಲೀಸರು ಆರೋಪಿಗಳ ಪೂರ್ವಾಪರ ವಿಚಾರಣೆ ಮಾಡಿದ್ದಾರೆ. ಈಗಾಗಲೇ ಆರೋಪಿಗಳ ಧ್ವನಿ ಪರೀಕ್ಷೆ ವರದಿಯನ್ನು ಎಫ್‌ಎಸ್‌ಎಲ್ಗೆ ನೀಡಿದೆ. ಆದರೂ ಹೆಚ್ಚಿನ ಮಾಹಿತಿಗಾಗಿ ಅಹಮದಾಬಾದ್ ಎ್ಎಸ್‌ಎಲ್ ಸ್ಯಾಂಪಲ್ ರವಾನೆ ಮಾಡಲಾಗಿದೆ.
ಎ್ಎಸ್‌ಎಲ್ ವರದಿ ಆಧರಿಸಿ ಹಾವೇರಿ ಜಿಲ್ಲೆಯ ಬ್ಯಾಡಗಿ ನಿವಾಸಿ ಮೊಹಮ್ಮದ್ ಶಫಿ ನಾಶಿಪುಡಿ, ಆರ್.ಟಿ.ನಗರದ ನಿವಾಸಿ ಮುನಾವರ್, ದೆಹಲಿ ಮೂಲದ ಇಲ್ತಾಜ್‌ನನ್ನು ವಿಧಾನಸೌಧ ಠಾಣೆ ಪೊಲೀಸರು ಎ್ಎಸ್‌ಎಲ್ ವರದಿ, ಸಾಂಧರ್ಬಿಕ ಸಾಕ್ಷ್ಯಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾೃಧಾರಗಳನ್ನು ಆಧರಿಸಿ ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net