ಹಿಂದು ಸಂಪ್ರದಾಯದಂತೆ ಮದ್ವೆಯಾದ ಇಬ್ಬರು ಹುಡುಗಿಯರು; ನಮ್ಮ ಗೋಳು ಕೇಳೋರು ಯಾರು? ಅಂದ್ರು ಬಾಯ್ಸ್​

two girls marry
Published on

ಉತ್ತರಪ್ರದೇಶದ: ಯುವಕ-ಯುವತಿಯರು ಮದುವೆಯಾದರೆ ಆಶ್ಚರ್ಯ ಪಡಬೇಕಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಡಿಯೋರಿಯಾ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಇಬ್ಬರು ಮಹಿಳೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ಅದ್ಧೂರಿಯಾಗಿ ನೆರವೇರಿದೆ. ಈ ಕುರಿತಾದ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ದೇವಸ್ಥಾನಕ್ಕೆ ತೆರಳಿ ಅತ್ಯಂತ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಇದೀಗ ಇವರ ಮದುವೆಯ ವಿಡಿಯೋ ವೈರಲ್ ಆಗಿದೆ. ಈ ಮದುವೆ ಡಿಯೋರಿಯೋ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಹಿಳೆಯರು 23 ಮತ್ತು 28 ವರ್ಷ ವಯಸ್ಸಿನವರಾಗಿದ್ದು, ಇಬ್ಬರೂ ಪಶ್ಚಿಮ ಬಂಗಾಳದವರು.

ಪಶ್ಚಿಮ ಬಂಗಾಳದ ಜಯಶ್ರೀ ರಾಹುಲ್ ಎಂಬ 28 ವರ್ಷದ ಯುವತಿ ರಾಖಿ ದಾಸ್ ಎಂಬ 23 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಡಿಯೋರಿಯಾದ ಆರ್ಕೆಸ್ಟ್ರಾ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯೇ ಭೇಟಿಯಾಗಿ ಪರಿಚಯ ಸ್ನೇಹವಾಗಿ.. ಸ್ನೇಹ ಪ್ರೀತಿಯಾಗಿ.. ಪ್ರೀತಿಯಿಂದ ಮದುವೆಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಇಬ್ಬರು ಹುಡುಗಿಯರ ಮದುವೆ ಈಗ ಹಾಟ್ ಟಾಪಿಕ್ ಆಗಿಬಿಟ್ಟಿದೆ.

ಜಯಶ್ರೀ ರಾಹುಲ್ ಮತ್ತು ರಾಖಿ ದಾಸ್ ಎಂಬ ಇಬ್ಬರು ಯುವತಿಯರು ಡಿಯೋರಿಯಾ ಜಿಲ್ಲೆಯ ಭಟ್ ಪರ್ ರಾಣಿಯ ಭವಾನಿ ದೇವಸ್ಥಾನದಲ್ಲಿ ವಿವಾಹವಾದರು. ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜಯಶ್ರೀ ರಾಹುಲ್ ವರನ ಗೆಟಪ್‌ನಲ್ಲಿ ಕುರ್ತಾ ಮತ್ತು ಪೈಜಾಮ ಇದ್ದರೆ, ರಾಖಿ ದಾಸ್ ವಧುವಿನ ಮಗಳಂತೆ ಸೀರೆಯನ್ನು ಧರಿಸಿದ್ದರು. ಮದುವೆಯ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net