ಉತ್ತರಪ್ರದೇಶ: ಬಾಲ್ಯದಿಂದಲೂ ಜತೆಯಾಗಿ ಬೆಳೆದಿದ್ದ ಸೋದರಿಯರನ್ನು ಕತ್ತು ಹಿಸುಕಿ ಕೊಂದ ಅಕ್ಕ; ಕಾರಣ ಏನು ಗೊತ್ತಾ..?

sisssss
Published on

ಉತ್ತರಪ್ರದೇಶ: ಯುವತಿಯೊಬ್ಬಳು ತನ್ನ ಇಬ್ಬರು ಸಹೋದರಿಯರನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೆಲವೇ ಗಂಟೆಗಳ ಅವಧಿಯಲ್ಲಿ ಆರೋಪಿ ಯುವತಿಯನ್ನ ಬಂಧಿಸಿದ್ದಾರೆ.


ಬಹದ್ದೂರ್‌ಪುರ ಗ್ರಾಮದಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ಸೋದರಿಯರನ್ನು ಜೈವೀರ್ ಸಿಂಗ್ ಅವರ ಪುತ್ರಿಯರಾದ ಸುರಭಿ (6) ಮತ್ತು ರೋಷ್ನಿ (4) ಎಂದು ಗುರುತಿಸಲಾಗಿದೆ.


ಆರೋಪಿ ಯುವತಿಯನ್ನು ಅಂಜಲಿ ಎಂದು ಗುರುತಿಸಲಾಗಿದ್ದು, ಅಪರಾಧ ಮಾಡಿದ ನಂತರ ಸಾಕ್ಷ್ಯವನ್ನು ನಾಶಪಡಿಸಲು ಈಕೆ ಪ್ರಯತ್ನಿಸಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.


ಜೈವೀರ್​ ಸಿಂಗ್​​ ಅವರ ಮನೆಯಲ್ಲಿ ಮೃತರ ಶವ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಆರೋಪಿ ಅಂಜಲಿ ಪಾಲ್ ಅಪರಾಧವನ್ನ ಒಪ್ಪಿಕೊಂಡಿದ್ದಾಳೆ. ಪ್ರಕರಣದ ಉದ್ದೇಶವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತನಿಖೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿ ಕುಮಾರ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯವನ್ನು ಮರೆಮಾಚುವುದು ಅಥವಾ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಆರೋಪಿ ಯುವತಿಯೊಂದಿಗೆ ಮೂವರು ಪುರುಷರನ್ನು ಸಹ ವಿಚಾರಣೆ ನಡೆಸಿರೋದಾಗಿ ಸ್‌ಪಿ ಸಂಜಯ್ ವರ್ಮಾ ತಿಳಿಸಿದ್ದಾರೆ.


ಅಂಜಲಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಮಕ್ಕಳು ನೋಡಿದ್ದರು ಹಾಗಾಗಿ ಅವರನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿ ಅಂಜಲಿ ಕೊಲೆಗೆ ಬಳಸಿದ್ದ ಗುದ್ದಲಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದಾಗ ಜೈವೀರ್, ಅವರ ಪತ್ನಿ ಸುಶೀಲಾ, ಅವರ ಮಕ್ಕಳಾದ ನಂದ್ ಕಿಶೋರ್ (12) ಮತ್ತು ಕನ್ಹಯ್ಯ (8) ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿಯ ಮನೆಯ ಹೊರಾಂಗಣದಲ್ಲಿ ಒಣಗಿ ಹಾಕಿದ್ದ ಕೆಲ ಬಟ್ಟೆಗಳನ್ನೂ ಫೊರೆನ್ಸಿಕ್​​ ತಂಡ ವಶಪಡಿಸಿಕೊಂಡಿದ್ದು, ತನಿಖಳೆಯ ಬಳಿಕ ಮತ್ತಷ್ಟು ವಿಚಾರ ಹೊರ ಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net