ಒಂದು ಜೀವ ಉಳಿಸಲು ಹೋಗಿ ಇಬ್ಬರ ಪ್ರಾಣವೂ ಹೋಯ್ತು!; ಆಗಿದ್ದೇನು?

Friends death
Published on

ದಾವಣಗೆರೆ: ಇದು ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಮತ್ತೊಂದು ಪ್ರಕರಣ. ಒಂದು ಜೀವ ಉಳಿಸುವ ಪ್ರಯತ್ನದಲ್ಲಿ ಇಬ್ಬರ ಪ್ರಾಣವೂ ಹೋಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ವಿಜಯನಗರ ಜಿಲ್ಲೆಯ ಆಲೂರು ಗ್ರಾಮದ ರಾಜು (19), ವಿಜಯ್ (19) ಮೃತಪಟ್ಟ ದುರ್ದೈವಿಗಳು. ಅಪಾಯಕ್ಕೆ ಸಿಲುಕಿದ್ದ ರಾಜುವನ್ನು ರಕ್ಷಿಸಲು ವಿಜಯ್ ಧಾವಿಸಿದ್ದು, ಬಳಿಕ ಇಬ್ಬರೂ ಸಾವಿಗೀಡಾಗಿದ್ದಾರೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಕುರಿ ಕಾಯಲು ಹೋಗಿದ್ದ ಇವರು, ಬಿಸಿಲಿನ ತಾಪ ಸಹಿಸಿಕೊಳ್ಳಲಾಗದೆ ಗೊಲ್ಲರಹಟ್ಟಿ ಕೆರೆಯಲ್ಲಿ ಈಜಲು ಹೋಗಿದ್ದರು. ಈಜುವ ವೇಳೆ ಆಳವಾದ ಗುಂಡಿಯಲ್ಲಿ ಮುಳುಗುತ್ತಿದ್ದ ರಾಜುವನ್ನು ರಕ್ಷಿಸಲು ವಿಜಯ್ ಕೂಡ ಧುಮುಕಿದ್ದ. ಆದರೆ ಕೊನೆಗೆ ಇಬ್ಬರೂ ಮುಳುಗಲಾರಂಭಿಸಿದ್ದಾರೆ.

ಇವರಿಬ್ಬರನ್ನು ರಕ್ಷಿಸಲು ಬಂದ ಮತ್ತೊಬ್ಬ ಯುವಕ, ಲುಂಗಿ, ಬನಿಯನ್, ಶರ್ಟ್ ಹಗ್ಗದ ರೀತಿ ಕಟ್ಟಿ ಕೆರೆಗೆ ಎಸೆದಿದ್ದ. ಅದಾಗ್ಯೂ ರಕ್ಷಣೆಯ ಯತ್ನ ಫಲಿಸುವ ಲಕ್ಷಣ ಗೋಚರಿಸದ್ದರಿಂದ ಸ್ಥಳೀಯರಿಗೆ ಮಾಹಿತಿ ನೀಡಿದ್ದ. ಗ್ರಾಮಸ್ಥರು ಶವಗಳನ್ನು ಹೊರತೆಗೆದಿದ್ದು, ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net