ಫೈವ್​ ಸ್ಟಾರ್​ ಹೋಟೆಲ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿದ್ದ ಫಾರಿನರ್ಸ್​ಗೆ ವಿದ್ಯುತ್ ಶಾಕ್; ಇಬ್ಬರು ದಾರುಣ ಸಾವು, ಕೇಸ್ ದಾಖಲು..Bengaluru

ಫೈವ್​ ಸ್ಟಾರ್​ ಹೋಟೆಲ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿದ್ದ ಫಾರಿನರ್ಸ್​ಗೆ ವಿದ್ಯುತ್ ಶಾಕ್; ಇಬ್ಬರು ದಾರುಣ ಸಾವು, ಕೇಸ್ ದಾಖಲು..Bengaluru
Published on: 
  • ಬೆಂಗಳೂರಿನ ಫೈವ್​ಸ್ಟಾರ್​ ಹೋಟೆಲ್​​ನಲ್ಲಿ ಇಬ್ಬರು ಫಾರಿನರ್ಸ್​ ಸಾವು.

  • ಸ್ವಿಮ್ಮಿಂಗ್​ ಪೂಲ್​ನಲ್ಲಿದ್ದ ವೇಳೆ ವಿದ್ಯುತ್​ ಸ್ಪರ್ಶಿಸಿದ್ದರಿಂದ ಮೃತಪಟ್ಟ ಇಬ್ಬರು ಫಾರಿನರ್ಸ್.

  • ಪ್ರಾಣಾಪಾಯದಿಂದ ಪಾರಾದ ಅಮೆರಿಕದ ಪ್ರಜೆ ಹಾಗೂ ಭಾರತೀಯ ಪೂಲ್ ಸಿಬ್ಬಂದಿ.

  • ಹೋಟೆಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಆರೋಪ, ಪೊಲೀಸರಿಂದ ತನಿಖೆ ಆರಂಭ.

ಬೆಂಗಳೂರು: ಸ್ವಿಮ್ಮಿಂಗ್​ ಪೂಲ್​ನಲ್ಲಿ ಹಾಯಾಗಿ ತೇಲಾಡುತ್ತಿದ್ದಾಗ ಇಬ್ಬರು ವಿದೇಶಿ ಪ್ರಜೆಗಳಿಗೆ ಕರೆಂಟ್​ ಶಾಕ್​ ಹೊಡೆದು, ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಪ್ರತಿಷ್ಠಿತ ಫೈವ್​ಸ್ಟಾರ್​​ ಹೋಟೆಲ್​ನಲ್ಲಿ ಬೆಳಕಿಗೆ ಬಂದಿದೆ. ಶುಕ್ರವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜರ್ಮನಿ ದೇಶದ ಪ್ರಜೆ, ಲುಫ್ಥಾನ್ಸಾ ಏರ್‌ಲೈನ್ಸ್​ ಉದ್ಯೋಗಿ 57 ವರ್ಷದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ ಹಾಗೂ ಸ್ಲೊವಾಕಿಯಾ ದೇಶದ ಪ್ರಜೆ ಹಾಗೂ ಐಬಿಎಂ ತಂತ್ರಜ್ಞಾನ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ 45 ವರ್ಷ ವಯಸ್ಸಿನ ಜುರಾಜ್ ಹೋರ್ವತ್ ಮೃತರು ಎಂದು ಗುರುತಿಸಲಾಗಿದೆ.

Also Read
2.5 ಲಕ್ಷ ರೂ. ಮೌಲ್ಯದ ಸಾಕು ಗಿಳಿ ರಕ್ಷಿಸಲು ಹೋದ ಬೆಂಗಳೂರು ಉದ್ಯಮಿ ವಿದ್ಯುತ್​ ಶಾಕ್​ಗೆ ಬಲಿ! Electrocution
ಫೈವ್​ ಸ್ಟಾರ್​ ಹೋಟೆಲ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿದ್ದ ಫಾರಿನರ್ಸ್​ಗೆ ವಿದ್ಯುತ್ ಶಾಕ್; ಇಬ್ಬರು ದಾರುಣ ಸಾವು, ಕೇಸ್ ದಾಖಲು..Bengaluru

ಏನಾಗಿತ್ತು?

ಶುಕ್ರವಾರ ಸಂಜೆ ಫೈವ್​ ಸ್ಟಾರ್​ ಹೋಟೆಲ್​ನ ಮೂರನೇ ಫ್ಲೋರ್​​​​​ನಲ್ಲಿದ್ದ ಸ್ವಿಮ್ಮಿಂಗ್​ ಪೂಲ್​ಗೆ ವಿದೇಶಿ ಪ್ರಜೆಗಳು ತೆರಳಿದ್ದರು. ಈವೇಳೆ ವಿದ್ಯುತ್​ ಪ್ರವಹಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಾಯದಲ್ಲಿದ್ದ ಅವರನ್ನು ರಕ್ಷಿಸಲು ಮುಂದಾದ ಅವರ ಗೆಳೆಯ ಹಾಗೂ ಸ್ವಿಮ್ಮಿಂಗ್​ ಪೂಲ್​ ಅಟೆಂಡೆಂಟ್​ಗೆ ವಿದ್ಯುತ್ ಸ್ಪರ್ಶಿಸಿ ತೀವ್ರ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇಬ್ಬರಿಗೆ ಗಂಭೀರ ಗಾಯ

41 ವರ್ಷದ ಅಮೆರಿಕನ್ ಪ್ರಜೆ ಮ್ಯಾಥ್ಯೂ ಡೆಸಾಂಟಿಸ್ ಹಾಗೂ 28 ವರ್ಷದ ರಾಹುಲ್ ತಿವಾರಿ ಭಾರತೀಯ ಪೂಲ್ ಅಟೆಂಡೆಂಟ್ ಗಾಯಗೊಂಡವರು. ಇಬ್ಬರನ್ನೂ ಸದ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೋಟೆಲ್​ ನಿರ್ಲಕ್ಷ್ಯದ ವಿರುದ್ಧ ತನಿಖೆಗೆ ಆಗ್ರಹ

ಫೈವ್​ಸ್ಟಾರ್​ ಹೋಟೆಲ್​ನ ಬಾಡಿಗೆ ವೆಚ್ಚ ಒಂದು ರಾತ್ರಿಗೆ 25 ಸಾವಿರ ರೂಪಾಯಿ. ಇಂತಹ ಹೋಟೆಲ್​ನಲ್ಲಿ ಸುರಕ್ಷತಾ ಲೋಪ ಉಂಟಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸದ್ಯ ಹಲಸೂರು ಪೊಲೀಸ್​ ಠಾಣೆಯಲ್ಲಿ ಮೃತ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ ಪತ್ನಿ ದೂರು ನೀಡಿದ್ದಾರೆ. ಹೋಟೆಲ್ ಆಡಳಿತ ಮಂಡಳಿ​ ಸುರಕ್ಷತೆ ಕೈಗೊಳ್ಳದೆ ಇರುವುದೇ ದುರಂತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಸ್ವಿಮ್ಮಿಂಗ್ ಪೂಲ್ ಮುಚ್ಚಿದ ಆಡಳಿತ ಮಂಡಳಿ

ಶನಿವಾರ ಬೆಳಿಗ್ಗೆ ಹೋಟೆಲ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈಜುಕೊಳವನ್ನು ಅಕ್ಟೋಬರ್ 31 ರಿಂದ ನವೆಂಬರ್ 30 ರವರೆಗೆ ನಿರ್ವಹಣೆಗಾಗಿ ಮುಚ್ಚಲಾಗಿದೆ ಎಂದು ಸೂಚನೆಯನ್ನು ಪ್ರಕಟಿಸಲಾಗಿದೆ, (ಏಜೆನ್ಸೀಸ್).