ಇಬ್ಬರು ಸುಲಿಗೆಕೋರರ ಸೆರೆ

Crime ( Arrest)
Published on

ಬೆಂಗಳೂರು: ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಪಾದಾಚಾರಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಗಜೀವನರಾಮನಗರ ಪೊಲೀಸರು ಬಂಧಿದ್ದಾರೆ.

ತಿಲಕನಗರದ ಮಹಮ್ಮದ್ ಯೂನೀಸ್ (29) ಮತ್ತು ವಿನಾಯಕನಗರದ ಮಹಮ್ಮದ್ ಇರ್ಫಾನ್ (22) ಬಂಧಿತರು. 2 ದ್ವಿಚಕ್ರ ವಾಹನ, 7 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೆ.ಜೆ.ನಗರದಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುವಾಗ ದ್ವಿಚಕ್ರ ವಾಹನದಲ್ಲಿ ಬಂದು ಮಾರಕಾಸ್ತ್ರ ತೋರಿಸಿ 30 ಸಾವಿರ ರೂ. ದೋಚಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net