

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ತುಂಬ ಖುಷಿಕೊಡುತ್ತವೆ. ಜೀವನೋತ್ಸಾಹ ಮೂಡಿಸುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಇಬ್ಬರು ವೃದ್ಧೆಯರು, ರಸ್ತೆ ಬದಿಯಲ್ಲಿ ಒಂದು ಹಳೇ ಹಿಂದಿ ಹಾಡಿಗೆ ಸಖತ್ ಎಂಜಾಯ್ ಮಾಡುತ್ತ, ನೃತ್ಯ ಮಾಡುವ ವಿಡಿಯೋ ಇದು..!
ಟ್ವಿಟರ್ ಬಳಕೆದಾರರೊಬ್ಬರು ಈ 15 ಸೆಕೆಂಡ್ಗಳ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 1971ರಲ್ಲಿ ಆಶಾ ಬೋಸ್ಲೆ ಅವರು ಹಾಡಿದ್ದ, ಪಿಯಾ ತೂ ಅಬ್ ತೋ ಆಜಾ ಎಂಬ ಹಾಡಿಗೆ ಫುಲ್ ಖುಷಿಯಿಂದ, ತಮ್ಮದೇ ರೀತಿಯಲ್ಲಿ ನೃತ್ಯ ಮಾಡುವುದನ್ನು ನೋಡಿದರೆ ಎಂಥವರ ಮುಖದಲ್ಲೂ ನಗು ಮೂಡುತ್ತದೆ. ವಿಡಿಯೋ ಶೇರ್ ಮಾಡಿಕೊಂಡಿರುವವರು ಇದೊಂದು ಮುದ್ದಾದ ದೃಶ್ಯ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಪಿಯಾ ತೂ ಅಬ್ ತೋ ಆಜಾ ಹಾಡು ಜಿತೇಂದ್ರ ಮತ್ತು ಆಶಾ ಪರೇಖ್ ಅಭಿನಯದ ಕಾರವಾನ್ ಸಿನಿಮಾದ್ದು. ಆಗಿನ ಕಾಲಕ್ಕೆ ತುಂಬ ಪ್ರಸಿದ್ಧಿ ಪಡೆದಿತ್ತು. ವಿಡಿಯೋ 9 ಸಾವಿರಕ್ಕೂ ಅಧಿಕ ವೀವ್ಸ್ ಪಡೆದಿದೆ. ನೆಟ್ಟಿಗರಂತೂ ತುಂಬ ಇಷ್ಟಪಟ್ಟಿದ್ದಾರೆ.
ವಿಡಿಯೋ ನೋಡಿ..ನಿಮಗೂ ಖುಷಿಯಾಗದಿದ್ದರೆ ಹೇಳಿ...