ಆನೆ ಕ್ಯಾಂಪ್​ಗೆ ಪಿಕ್ನಿಕ್​ಗೆ ಹೋಗಿದ್ದ ಶಾಲಾ ಮಕ್ಕಳಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವು

Death March 4
Published on

ಕೊಡಗು: ಶಾಲೆಯಿಂದ ಪಿಕ್ನಿಕ್​ಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಪೇಟೆ ತಾಲೂಕಿನ ದುಬಾರೆಯಲ್ಲಿ ನಡೆದಿದೆ.

ಶ್ರೇಯಸ್​ (14) ಮತ್ತು ಲೆನಿನ್​ (15) ಮೃತರು. ಶಾಲಾ ಮಕ್ಕಳು ದುಬಾರೆ ಆನೆ ಕ್ಯಾಂಪ್​ಗೆ ಪಿಕ್ನಿಕ್​​ಗೆ ತೆರಳಿದ್ದರು. ನದಿ ದಾಟುವಾಗ ಆಳವಾದ ಜಾಗಕ್ಕೆ ಹೋದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೇಯಸ್​ 9ನೇ ಹಾಗೂ ಲೆನಿನ್​ 10ನೇ ತರಗತಿಯಲ್ಲಿ ಓದುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net