ಬಿಸಿಲಿನ ತಾಪಕ್ಕೆ ವಾಂತಿ, ಬೇಧಿ: ರಾಯಚೂರಿನಲ್ಲಿ ಇಬ್ಬರು ಮಕ್ಕಳು ಸಾವು

death raichuru
Published on

ರಾಯಚೂರು: ಬಿಸಿಲಿನಿಂದ ಜನರು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ರಾಯಚೂರು, ಕಲಬುರಗಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.

ಬಿಸಿಲಿನ ತಾಪಕ್ಕೆ ವಾಂತಿ, ಬೇಧಿ ಹಿನ್ನೆಲೆ ಒಂದೇ ಕುಟುಂಬದ ಇಬ್ಬರು ಮಕ್ಕಳು ಬಲಿಯಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ  ರಾಯಚೂರು ತಾಲ್ಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ಘಟ‌ನೆ.

ಆರತಿ (9) ಹಾಗೂ ಪ್ರಿಯಾಂಕ್(7) ಮೃತ ಮಕ್ಕಳು.  ಲಕ್ಕಪ್ಪ (5)ಗೆ ಐಸಿಯುನಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದೆ. ಹುಸೇನಮ್ಮ ಹಾಗೂ ಮಾರುತಿ ದಂಪತಿ ಮಕ್ಕಳು. ಪೋಷಕರಾದ ಹುಸೇನಮ್ಮ ಹಾಗೂ ಮಾರುತಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೇಸಿಗೆ ಹಿನ್ನೆಲೆ ನಿರ್ಜಲೀಕರಣದಿಂದ ವಾಂತಿ, ಬೇಧಿ ಉಂಟಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುಟುಂಬಸ್ಥರು ಕೃಷ್ಣಾ ನದಿ ನೀರನ್ನ ಸೇವಿಸುತ್ತಿದ್ದರು ಎನ್ನಲಾಗಿದೆ. ನಿನ್ನೆ ಸಂಜೆ ಏಕಾಏಕಿ ಸಮಸ್ಯೆ ಉಲ್ಬಣ ಗೊಂಡಿದ್ದ ಹಿನ್ನೆಲೆ  ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net