

ದಾವಣಗೆರೆ: ಹಸುವಿನ ಮೈ ತೊಳೆಸಲು ಕೆರೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ದುರ್ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್.ಗೋಪಗೊಂಡನಹಳ್ಳಿಯಲ್ಲಿ ನಡೆದಿದೆ.
ಮಹೇಶ್ ಮತ್ತು ಮನು ಮೃತರು. ಇಬ್ಬರೂ 14 ವರ್ಷದ ಬಾಲಕರಾಗಿದ್ದು, ಆಕಳನ್ನು ಕರೆದುಕೊಂಡು ಕೆರೆ ಬಳಿ ಹೋಗಿದ್ದರು. ಇದೀಗ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ತುಷಾರ್ ಬಿ.ಹೊಸೂರ, ಸಿಪಿಐ ಟಿ.ವಿ.ದೇವರಾಜ್, ಪಿಎಸ್ಐ ತಿಪ್ಪೇಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.