ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

Published on

ನಾಪೋಕ್ಲು: ಮರಂದೋಡ ಗ್ರಾಮದಲ್ಲಿ ಗಾಂಜಾ ಮಾರಾಟ ಹಾಗೂ ಸರಬರಾಜು ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ನಾಪೋಕ್ಲು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅಸ್ಸೋಂ ರಾಜ್ಯದ ಧರೋಂಗ್ ಜಿಲ್ಲೆ ಮೂಲದ ಕಬ್ಬಿನ ಕಾಡು ಮರಂದೊಡ ಗ್ರಾಮದ ನಿವಾಸಿ ಅಮೀರ್ ಹುಸೇನ್ (34) ಮತ್ತು ಮುನಾವರ್ ರ್ಹುಸೇನ್ (34) ಬಂಧಿತರು.

ಮರಂದೊಡ ಗ್ರಾಮದ ಬಿದ್ದಂಡ ತಟ್ಟು ರಸ್ತೆಯಲ್ಲಿರುವ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ನಾಪೋಕ್ಲು ಪೊಲೀಸರು ದಾಳಿ ನಡೆಸಿದಾಗ ಇವರು ಸಿಕ್ಕಿಬಿದ್ದಿದ್ದಾರೆ. ಇವರಿಂದ 2 ಕೆಜಿ 288 ಗ್ರಾಂ ವಶಪಡಿಸಿಸಿಕೊಂಡು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net