

ಯಾದಗಿರಿ: ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂದು ಯುವಕರಿಬ್ಬರು ಮಾಡಿದ್ದ ರೀಲ್ಸ್ ವಿಡಿಯೋ ವೈರಲ್ ಆಗಿದ್ದು, ಇದೀಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಯಾದಗಿರಿ ನಗರದ ನಿವಾಸಿಗಳಾದ ಅಕ್ಬರ್ ಸೈಯದ್ ಬಹದ್ದೂರ್ (23) ಹಾಗೂ ಎಂ.ಡಿ ಅಯಾಜ್ (21) ಆರೋಪಿಗಳು. ಇವರು ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂದಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.
ಈ ಎಕ್ಸ್ ಬಳಕೆದಾರರು ಪ್ರಧಾನಿ ಮೋದಿಗೆ ವಿಡಿಯೋ ಮೆನ್ಷನ್ ಮಾಡಿದ್ದರು. ಅದಾದ ಕೆಲವೇ ಸಮಯದಲ್ಲಿ ಈ ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಯಾದಗಿರಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.