ಯುವತಿಯರ ಚುಡಾಯಿಸಿದ್ದ ಇಬ್ಬರ ಸೆರೆ

Arrest Kaidhi
Published on

ಬೆಂಗಳೂರು: ತಾಯಿಯೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ಅಪ್ರಾಪ್ತೆಯರನ್ನು ಚುಡಾಯಿಸಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ನಿವಾಸಿಗಳಾದ ಮುಬಾರಕ್ (೨೨) ಮತ್ತು ಹಫೀಫ್(೨೧) ಬಂಧಿತರು. ಬಾಲಕಿಯರ ತಾಯಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಮಹಿಳೆ ಏ.೨೩ರಂದು ತನ್ನ ಇಬ್ಬರು ಮಕ್ಕಳೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಸಾರಕ್ಕಿ ಮಾರುಕಟ್ಟೆ ಬಳಿ ಬೈಕ್‌ನಲ್ಲಿ ಬಂದ ಆರೋಪಿಗಳು ಆಟೋ ಅಡ್ಡಗಟ್ಟಿದ್ದರು. ಬಳಿಕ ಬಾಲಕಿಯರಿಗೆ ನಿಮ್ಮ ಕಾಲೇಜು ಯಾವುದು ಎಂದು ಕೇಳುತ್ತಾ. ಅಸಭ್ಯವಾಗಿ ವರ್ತಿಸಿ, ಮಾತನಾಡಿದ್ದಾರೆ. ಆಗ ಆರೋಪಿಗಳನ್ನು ಪ್ರಶ್ನಿಸಿದ ಆಟೋ ಚಾಲಕನಿಗೂ ಆರೋಪಿಗಳು ಅವಾಚ್ಯವಾಗಿ ನಿಂದಿಸಿದ್ದರು. ಬಳಿಕ ದೂರುದಾರ ಮಹಿಳೆ ಆರೋಪಿಗಳನ್ನು ಪ್ರಶ್ನಿಸಿದಾಗ ಆಕೆಗೂ ನಿಂದಿಸಿದ್ದಾರೆ. ನಂತರ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪಾರಾರಿಯಾಗಿದ್ದರು. ಈ ಸಂಬಂಧ ಮಹಿಳೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net