ಸುಂಟಿಕೊಪ್ಪ : ಎರಡು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಸಂಗ್ರಹಿಸಿದ್ದ ಆರೋಪದ ಮೇಲೆ ಇಬ್ಬರು ಕಳ್ಳ ಬೇಟೆಗಾರರನ್ನು ಕುಶಾಲನಗರ ವಲಯದ ಆನೆಕಾಡು ಶಾಖೆ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಲೈನ್ ಮನೆಯಲ್ಲಿ ವಾಸವಾಗಿರುವ ಗಣೇಶ್ ಅವರ ಮಗ ಸುನೀಲ್(34) ಮತ್ತು ಕೆ.ಎಂ.ದೇವಯ್ಯ ಅವರ ಮಗ ಕೆ.ಡಿ.ಮುತ್ತಣ್ಣ (59) ಬಂಧಿತರು. ಮತ್ತೊಬ್ಬ ನಾಣಯ್ಯ ಅವರ ಮಗ ಎ.ಎನ್.ಶ್ಯಾಮ್ (50) ಎಂಬಾತ ತಲೆಮರೆಸಿಕೊಂಡಿದ್ದು ಈತನ ಬಂಧನಕ್ಕೆ ಬಲೆ ಬೀಸಲಾಗಿದೆ. ಸದ್ಯ ಇಬ್ಬರು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅತ್ತೂರು ನಲ್ಲೂರು ಗ್ರಾಮದ ನವೀನ್ ಕರುಂಬಯ್ಯ ಅವರ ಕಾಫಿತೋಟದಲ್ಲಿ ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿ ಶೇಖರಿಸಿಟ್ಟಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ಜಿಂಕೆಗಳ ಚರ್ಮ, ತಲೆ-ಕಾಲುಗಳು, ಹೊಟ್ಟೆಯ ಒಳಭಾಗದ ಅಂಗಾಂಗಳನ್ನು ತೋಟದಲ್ಲಿ ಹೂತಿಟ್ಟಿದ್ದನ್ನು ಪತ್ತೆಹಚ್ಚಿದ್ದಾರೆ.