ಕಂಠಪೂರ್ತಿ ಕುಡಿದು ಐಫೆಲ್ ಟವರನ್ನೇ ಏರಿದ ಅಮೆರಿಕನ್ನರು..!

tower
Published on

ರಾತ್ರಿ ಕಂಠಪೂರ್ತಿ ಕುಡಿದು ಇಬ್ಬರು ಅಮೆರಿಕನ್ನರು ಐಫೆಲ್ ಟವರ್ ಏರಿ ಮಲಗಿರುವ ಘಟನೆ ಬೆಳಕಿಗೆ ಬಂದಿದೆ. ಐಫೆಲ್ ಟವರ್​ಗೆ ಅಷ್ಟೊಂದು ಭದ್ರತೆ ಇದ್ದರೂ ಆ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಐಫೆಲ್ ಟವರ್ ಏರಿದ್ದಾರೆ.


ಐಫೆಲ್ ಟವರ್​ಗೆ ಅಷ್ಟೊಂದು ಭದ್ರತೆ ಇದ್ದರೂ ಆ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಐಫೆಲ್ ಟವರ್ ಏರಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಐಫೆಲ್ ಟವರ್ ಬಾಗಿಲು ತೆರೆಯುವ ಮುಂಚಿತವಾಗಿಯೇ ಇಬ್ಬರು ಟವರ್ ಮೇಲೆ ಓಡಾಡುತ್ತಿರುವುದು ಕಂಡುಬಂತು. ಅವರು ಮದ್ಯಪಾನ ಮಾಡಿದ್ದರಿಂದ ಕೆಳಗೆ ಇಳಿಯಲಾಗದೆ ಅಲ್ಲೇ ಉಳಿದಿದ್ದಾರೆ.


ಕುಡಿದ ಅಮೆರಿಕನ್ನರು ಇಡೀ ರಾತ್ರಿ ಈ ಎರಡು ಗೋಪುರಗಳ ನಡುವೆ ನಕ್ಷತ್ರಗಳ ಕೆಳಗೆ ಕಳೆದಿದ್ದಾರೆ. ಆದರೆ ಯಾವುದೇ ರೀತಿ ಗಲಾಟೆಯನ್ನು ಅವರು ಮಾಡಲಿಲ್ಲ.


ಪ್ರವಾಸಿಗರಿಬ್ಬರೂ ಕಳೆದ ಭಾನುವಾರ ರಾತ್ರಿ 10:40 ರ ಸುಮಾರಿಗೆ ಪ್ರವೇಶ ಟಿಕೆಟ್‌ಗಳನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ. ಆದರೆ ಅವರು ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಟವರ್ ಏರಿದರು. ವರದಿಯ ಪ್ರಕಾರ, ಅಪಾಯಕಾರಿ ಎತ್ತರದಿಂದ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯ ವಿಶೇಷ ತಂಡವನ್ನು ಕಳುಹಿಸಲಾಗಿದೆ.


ಇವರಿಬ್ಬರನ್ನೂ ಪ್ಯಾರಿಸ್ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದ್ದು, ಮಿನಲ್ ದೂರು ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net