

Disha Patani: ಕಳೆದ ವಾರ ಬಾಲಿವುಡ್ನ ಹಾಟ್ಬ್ಯೂಟಿ ದಿಶಾ ಪಟಾನಿ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸರ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾರೆ.
ನಟಿಯನ್ನು ಟಾರ್ಗೆಟ್ ಮಾಡಿಕೊಂಡಿದ್ದ ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದರು. ದಾಳಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ನಟಿಯ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದ ದುಷ್ಕರ್ಮಿಗಳು ಪೊಲೀಸರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡರು. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆರೋಪಿಗಳು ಸಾವನ್ನಪ್ಪಿದ್ದಾರೆ.
'ಇಂಡಿಯಾ ಟುಡೇ' ವರದಿ ಪ್ರಕಾರ, ಆರೋಪಿಗಳನ್ನು ರೋಹ್ಟಕ್ ಮೂಲದ ರವೀಂದ್ರ ಅಲಿಯಾಸ್ ಕಲ್ಲು ಮತ್ತು ಹರಿಯಾಣದ ಸೋನಿಪತ್ ನಿವಾಸಿ ಅರುಣ್ ಎಂದು ಗುರುತಿಸಲಾಗಿದೆ. ಇಬ್ಬರೂ ರೋಹಿತ್ ಗೋದಾರ–ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದು, ಹಲವಾರು ಕ್ರಿಮಿನಲ್ ಕೇಸ್ಗಳಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳು ಎಂದು ಎಸ್‌ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಟಿ ದಿಶಾ ಮತ್ತು ಆಕೆಯ ಸಹೋದರಿ ಧಾರ್ಮಿಕ ಮುಖಂಡರಾದ ಸಂತ ಪ್ರೇಮಾನಂದ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಕುರಿತು ನೀಡಿದ ಅಕ್ಷೇಪಾರ್ಹ ಹೇಳಿಕೆಯ ವಿರುದ್ಧವಾಗಿ ನಟಿಯ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಈ ಕೃತ್ಯವನ್ನು ಸ್ವತಃ ತಾವೇ ಮಾಡಿರುವುದಾಗಿ ಗೋಲ್ಡಿ ಬ್ರಾರ್ ಗ್ಯಾಂಗ್ ಫೇಸ್ಬುಕ್ ಪೋಸ್ಟ್ ಮೂಲಕ ಸ್ಪಷ್ಟಪಡಿಸಿತು,(ಏಜೆನ್ಸೀಸ್).