

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೇಲೆ ಕೆಜಿಎಫ್ ಪರಿಣಾಮ ಬೀರಿದೆ. ಅರ್ಥಾತ್, ಕೆಜಿಎಫ್ ಇಫೆಕ್ಟ್ನಿಂದಾಗಿ ಕಾಂಗ್ರೆಸ್ನ ಟ್ವಿಟರ್ ಖಾತೆಗಳು ಬ್ಲಾಕ್ ಆಗಲಿವೆ. ಕಾಂಗ್ರೆಸ್ ಪಕ್ಷದ ಹಾಗೂ ಭಾರತ್ ಜೋಡೋ ಯಾತ್ರಾ ಖಾತೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡುವಂತೆ ಟ್ವಿಟರ್ಗೆ ನ್ಯಾಯಾಲಯ ಆದೇಶಿಸಿದೆ.
ಕೆಜಿಎಫ್-2 ಚಿತ್ರದ ಹಾಡಿನ ತುಣುಕುಗಳನ್ನು ಬಳಸಿಕೊಂಡಿದ್ದಕ್ಕೆ ಎಂಆರ್ಟಿ ಮ್ಯೂಸಿಕ್ ಸಂಸ್ಥೆ ಕಾಪಿರೈಟ್ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಕೇಸು ದಾಖಲಿಸಿತ್ತು. ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮುಂತಾದವರ ವಿರುದ್ಧ ದೂರು ದಾಖಲಿಸಲಾಗಿತ್ತು.
ಭಾರತ್ ಜೋಡೋ ಯಾತ್ರೆಯ ಅಭಿಯಾನದ ವಿಡಿಯೋಗಳಲ್ಲಿ ಕೆಜಿಎಫ್-2 ಸಿನಿಮಾದ ಹಾಡುಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿತ್ತು ಎಂದು ಎಂಆರ್ಟಿ ಮ್ಯೂಸಿಕ್ ಸಂಸ್ಥೆಯ ಮ್ಯಾನೇಜರ್ ಎಂ. ನವೀನ್ ಕುಮಾರ್ ಆರೋಪಿಸಿದ್ದರು.