

Twinkle Khanna: ಕೂದಲಿನ ಚಿಕಿತ್ಸೆಗಾಗಿ ಹಲವಾರು ಜನರು ಸಲೂನ್ ಚಿಕಿತ್ಸೆಗಳು ಮತ್ತು ರಾಸಾಯನಿಕಗಳಿಂದ ತುಂಬಿದ ಉತ್ಪನ್ನಗಳನ್ನು ಬಳಸುತ್ತಿರುವಂತಹ ಕಾಲದಲ್ಲಿ ನಟಿ ಲೇಖಕಿ, ಟ್ವಿಂಕಲ್ ಖನ್ನಾ ಕೂದಲಿನ ರಕ್ಷಣೆಗಾಗಿ ನೈಸರ್ಗಿಕವಾದ ಮನೆಮದ್ದುಗಳನ್ನು ಬಳಸುವುದಾಗಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ದುಬಾರಿ ಚಿಕಿತ್ಸೆಗಳನ್ನು ಅವಲಂಬಿಸಿರುವ ಅನೇಕ ಜನರಿಗಿಂತ ಭಿನ್ನವಾಗಿ ಟ್ವಿಂಕಲ್ ಹೆಚ್ಚು ಮನೆಮದ್ದುಗಳನ್ನು ಬಯಸುತ್ತಾರೆ. ಇವರು ತಮ್ಮ ನೆತ್ತಿಯ ಮೇಲೆ ಬಿಯರ್, ಮೊಸರು ಮತ್ತು ಮೊಟ್ಟೆಯಂತಹ ಪದಾರ್ಥಗಳನ್ನು ನೇರವಾಗಿ ಅದರ ಮೇಲೆ ಹಾಕುವುದರ ಮೂಲಕ ನೆತ್ತಿಯನ್ನು ಫ್ರಿಜ್ಡ್ನಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ವಿಧಾನಗಳನ್ನು ಆಕೆಯ ತಾಯಿ ಡಿಂಪಲ್ ಕಪಾಡಿಯಾ ಅವರಿಂದ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಕೂದಲಿನ ಬೆಳವಣಿಗೆಗೆ ಈರುಳ್ಳಿ ರಸದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಟ್ವಿಂಕಲ್ ಈರುಳ್ಳಿ ರಸವನ್ನು ತೆಗೆದು ಅದನ್ನು ಬೆರಳ ತುದಿಯಿಂದ ನೆತ್ತಿಗೆ ಮಸಾಜ್ ಮಾಡುತ್ತಾರೆ. 20 ನಿಮಿಷಗಳ ಕಾಲ ಬಿಟ್ಟು ಚೆನ್ನಾಗಿ ತೊಳೆಯುತ್ತೇನೆ ಎಂದು ತಿಳಿಸಿದ್ದಾರೆ.
ಅವರು ತಮ್ಮ ಪೋಸ್ಟ್ನಲ್ಲಿ ಹಾಸ್ಯಾಮವಾಗಿ ಬರೆದುಕೊಂಡಿದ್ದು, ದಿನಕ್ಕೊಂದು ಈರುಳ್ಳಿ ಎಲ್ಲರನ್ನೂ ದೂರವಿಡಬಹುದು ಆದರೆ, ಅದು ಬೇರುಗಳನ್ನು ಬಲಪಡಿಸುತ್ತದೆ. ಅದನ್ನು 20 ನಿಮಿಷಗಳ ಕಾಲ ಹಾಗೆಯೇ ಇರಿಸಿ ನಂತರ ಎಲ್ಲವನ್ನೂ ತೊಳೆಯಿರಿ. ಇದೇ ಫಲಿತಾಂಶಗಳನ್ನು ನೀಡುವಂತಹ ಕಡಿಮೆ ವಾಸನೆಯ ಆಯ್ಕೆಯನ್ನು ಬಯಸಿದಾಗ ನಾನು ಭೃಂಗರಾಜ್ ಹೇರ್ ವೈಟಲೈಸರ್ ಅನ್ನು ಸಿಂಪಡಿಸಿ ನನ್ನ ದಿನವನ್ನು ಮುಂದುವರಿಸುತ್ತೇನೆ ಎಂದು ಹಂಚಿಕೊಂಡಿದ್ದಾರೆ.
ಭಾರತೀಯ ಮನೆಗಳಲ್ಲಿ ಈರುಳ್ಳಿ ರಸವು ಕಾಲದಿಂದ ಮಾನ್ಯತೆ ಪಡೆದ ನೈಸರ್ಗಿಕ ಔಷಧವಾಗಿದೆ. ಇದು ಕೂದಲಿನ ಪ್ರಯೋಜನಗಳನ್ನು ಬೆಂಬಲಿಸುತ್ತದೆ. ಜೊತೆಗೆ ಗಂಧಕದಿಂದ ಸಮೃದ್ಧವಾಗಿರುವ ಇದು ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ, ನೆತ್ತಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇವೆಲ್ಲವೂ ಆರೋಗ್ಯಕರ, ದಪ್ಪ ಕೂದಲಿಗೆ ಕೊಡುಗೆ ನೀಡುತ್ತವೆ.
ಈರುಳ್ಳಿ ರಸದಲ್ಲಿರುವ ನಂಜು ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಲಕ್ಷಣಗಳು ತಲೆಹೊಟ್ಟು, ಸೋಂಕುಗಳು ಮತ್ತು ಕೂದಲು ತೆಳುವಾಗುವುದು ಮುಂತಾದ ಸಾಮಾನ್ಯ ನೆತ್ತಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಈ ಈರುಳ್ಳಿ ರಸವನ್ನು ನಿಯಮಿತವಾಗಿ ತಲೆಗೆ ಸಿಂಪಡಿಸುವುದರಿಂದ ಅಕಾಲಿಕ ಬೂದು ಬಣ್ಣವನ್ನು ತಡೆಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಈರುಳ್ಳಿ ರಸವು ಹೆಚ್ಚು ಪರಿಣಾಮಕಾರಿಯಾಗಿದ್ದರೂ, ಹೆಚ್ಚು ಆಹ್ಲಾದಕರವಾದ ವಾಸನೆಯನ್ನು ಬಯಸುವವರು ಭೃಂಗರಾಜ ಎಣ್ಣೆ ಅಥವಾ ಹೇರ್ ಟಾನಿಕ್ಸ್, ಅಲೋವೆರಾ ಜೆಲ್, ದಾಸವಾಳದ ಎಣ್ಣೆ ಅಥವಾ ಕರಿಬೇವು ಸೇರಿಸಿದ ತೆಂಗಿನ ಎಣ್ಣೆಯನ್ನು ಪ್ರಯತ್ನಿಸಬಹುದು. ಈ ನೈಸರ್ಗಿಕ ಪರಿಹಾರಗಳು ನೆತ್ತಿಯ ಆರೋಗ್ಯವನ್ನು ಬೆಂಬಲಿಸುತ್ತವೆ. ಹಾಗೆಯೇ ಕೂದಲಿನ ತುದಿಯನ್ನು ಒಡೆಯುವುದನ್ನು ನಿಲ್ಲಿಸಿ ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ. (ಏಜೆನ್ಸೀಸ್)