

Vasthu tips: ಹಿಂದೂ ಧರ್ಮದಲ್ಲಿ ಅಪರಾಜಿತ ಹೂವುಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳಲ್ಲಿ, ಈ ಹೂವುಗಳನ್ನು ದುರ್ಗಾ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಪರಾಜಿತ ಸಸ್ಯಗಳನ್ನು ನೆಡುವುದರಿಂದ ಪ್ರಗತಿ ಬರುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ. ಆದರೆ ಇದಕ್ಕಾಗಿ, ಅಪರಾಜಿತವನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು. ಅಲ್ಲದೆ, ವಾಸ್ತುವಿನ ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿದೆ.
ನಿಮ್ಮ ಮನೆಯ ಪೂಜೆಯಲ್ಲಿ ಅಪರಾಜಿತ ಹೂವುಗಳನ್ನು ಬಳಸುವುದರಿಂದ ಶುಭ ಎಂದು ಗುರುತಿಸಲಾಗಿದೆ. ಕೆಲವು ನಿಯಮಗಳ ಪ್ರಕಾರ, ಮನೆಯಲ್ಲಿ ಸಸ್ಯವನ್ನು ನೆಟ್ಟರೆ, ನೀವು ದೇವತೆಗಳ ಆಶೀರ್ವಾದವನ್ನು ಪಡೆಯುತ್ತೀರಿ. ಹಾಗಾಗಿ ಮನೆಯಲ್ಲಿ ಅಪರಾಜಿತ ಸಸ್ಯಗಳನ್ನು ನೆಡುವ ನಿಯಮಗಳನ್ನು ವಿವರವಾಗಿ ತಿಳಿಯೋಣ ಬನ್ನಿ....
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಪರಾಜಿತ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ದಿನದಂದು ನೆಡುವುದು ಮುಖ್ಯವಾಗಿದೆ. ಏಕೆಂದರೆ, ಇದು ವಿಷ್ಣು ದೇವರಿಗೆ ಈ ಹೂವು ತುಂಬಾ ಇಷ್ಟ. ಹಾಗಾಗಿ ಗುರುವಾರ ನೆಡುವುದರಿಂದ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಶುಕ್ರವಾರ ನೆಡುವುದರಿಂದ ಲಕ್ಷ್ಮೀ ದೇವತೆಗೆ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಅಪರಾಜಿತ ಸಸ್ಯವನ್ನು ನೆಡುವುದರಿಂದ ಇದು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ವಾಸ್ತು ಪ್ರಕಾರ ಮನೆಯಲ್ಲಿ ಅಪರಾಜಿತ ಗಿಡವನ್ನು ನೆಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಪರಾಜಿತ ಗಿಡವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ನೆಡುವುದರಿಂದ ಮನೆಯ ನರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಸಂತೋಷ ವಾತಾವರಣವನ್ನು ಸೃಷ್ಟಿಸುವಂತೆ ಮಾಡುತ್ತದೆ. ಹಾಗೆಯೇ ತಪ್ಪಾಗಿಯೂ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ನೆಡಬೇಡಿ ಇದು ನಿಮ್ಮ ಕುಟುಂಬಕ್ಕೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ.
ನಿಮ್ಮ ಮನೆಯಲ್ಲಿ ಆರ್ಥಿಕ ಹಾಗೂ ಶುಭ ತರಲು ಅಪರಾಜಿತ ಗಿಡವನ್ನು ನೆಡುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಿದ್ದರೆ ದಿಕ್ಕು, ದಿನದ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಿರಿ. ವಾಸ್ತು ಪ್ರಕಾರ, ಗಿಡವನ್ನು ನೆಡುವಾಗ ಯಾವಾಗಲು ಆ ಸ್ವಚ್ಛ ಇರುವಂತಹ ಸ್ಥಳದಲ್ಲಿಯೇ ಇರಿಸಬೇಕು. ಏಕೆಂದರೆ ಈ ಗಿಡವನ್ನು ಅಶುದ್ಧ ಸ್ಥಳದಲ್ಲಿ ನೆಡುವುದರಿಂದ ನಿಮ್ಮ ಮನೆಯ ಜನರ ಪ್ರಗತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಗಿಡಕ್ಕೆ ನೀರು ಹಾಕಿ. ಇದರ ಜೊತೆಗೆ, ನಿಮ್ಮ ಮನೆಯಲ್ಲಿರುವ ಅಪರಾಜಿತ ಗಿಡವು ಎಂದಿಗೂ ಒಣಗದಂತೆ ನೀವು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ನಿಮ್ಮ ಮನೆಯ ಆರ್ಥಿಕ ಪ್ರಗತಿಗೆ ಅಡ್ಡಿ ಉಂಟುಮಾಡಬಹುದು.
* ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
* ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ
* ಹಣವು ಮನೆಯಲ್ಲಿ ಉಳಿಯಲು ಪ್ರಾರಂಭಿಸುತ್ತದೆ
* ಉದ್ಯೋಗ ವ್ಯಾಪಾರವು ಪ್ರವರ್ಧಮಾನಕ್ಕೆ ಬರುತ್ತದೆ
* ಮನೆಯಲ್ಲಿನ ವಾತಾವರಣವು ಸಂತೋಷದಾಯಕವಾಗಿರುತ್ತದೆ (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.