ಹದ್ದು ಮೀರಿದ ಬಿಜೆಪಿ-ಕಾಂಗ್ರೆಸ್ ಟ್ವಿಟ್ಟರ್ ಕೋಳಿ ಜಗಳ!

BJP-Congress Logo
Published on

ಬೆಂಗಳೂರು: ಕಾಂಗ್ರೆಸ್-ಬಿಜೆಪಿ ನಡುವಿನ ಟ್ವಿಟ್ಟರ್ ಕೋಳಿ ಜಗಳ ಹದ್ದು ಮೀರಿದ್ದು ದಿನಬೆಳಗಾದರೆ ಕಿತ್ತಾಟ ಸಾಗಿದೆ. ಈರ್ವರೂ ಶುಕ್ರವಾರ ಡಿಎನ್‌ಎ ಟೆಸ್ಟ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆಗಳನ್ನು ವಿನಿಮಯ ಮಾಡಿಕೊಂಡಿವೆ.

ಕುಟುಂಬ ರಾಜಕಾರಣದ ಚರ್ಚೆ ಮುಂದುವರಿದ ಭಾಗವಾಗಿ, ‘ನಿಮ್ಮ ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರು ಬಿಎಸ್‌ವೈ ಅವರ ಮಗನಲ್ಲವೇ? ಡಿಎನ್‌ಎ ಟೆಸ್ಟ್ ಮಾಡಿಸಬೇಕೇ?! ಅಂದಹಾಗೆ ನಿಮ್ಮ ಪಕ್ಷ, ಬೆನ್ನೆಲುಬಿಲ್ಲದ ಕಾಡುಮನುಷ್ಯ ನಳೀನ್ ಕುಮಾರ್ ಕಟೀಲು ಹಿಡಿತದಲ್ಲಿದೆ ಎನ್ನುವುದು ಪ್ರತಿ ದಿನವೂ ನಡೆಯುತ್ತಿರುವ ಬೀದಿ ಜಗಳದಿಂದ ರಾಜ್ಯದ ಜನತೆಗೆ ತಿಳಿದಿದೆ ಬಿಡಿ!’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಯು ‘ರಾಹುಲ್ ಗಾಂಧಿಯವರೇ, ನಿಮ್ಮ ಅಜ್ಜಿ ಇಂದಿರಾ ನೆಹರು, ನಿಮ್ಮ ಅಜ್ಜ ಫಿರೋಜ್ ಗಾಂಧಿ, ನಿಮ್ಮ ತಾಯಿ ಸೋನಿಯಾ ಮೈನೋ, ನೀವು ಹೇಗೆ ರಾಹುಲ್ ಗಾಂಧಿ ಆದಿರಿ. ಡಿಎನ್‌ಎ ಎಕ್ಸ್‌ಪರ್ಟ್ ಆದಂತಹ ಕರ್ನಾಟಕ ಕಾಂಗ್ರೆಸ್ ಈ ಅಸ್ವಾಭಾವಿಕ ವಿದ್ಯಮಾನವನ್ನು ವಿವರಿಸುವುದೇ?’ ಎಂದು ಕೆಣಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net