

ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ. ಕೋರ್ಟ್ನಲ್ಲಿ ಸಿಡಿ ಲೇಡಿ ಪರವಾಗಿ ವಾದಿಸುತ್ತಿರುವುದು ವಕೀಲ ಕೆ.ಎನ್.ಜಗದೀಶ್ ಅಲ್ಲ. ಬದಲಿಗೆ ಮಂಜು ಎನ್ನುವ ವಕೀಲ ಯುವತಿ ಪರ ವಕಾಲತ್ತು ವಹಿಸಿದ್ದಾರೆ. ಆದರೆ ಜಗದೀಶ್ ಅವರು ಸುಮ್ಮನೇ ಬೀದಿ ರಂಪಾಟ ಮಾಡುತ್ತಿದ್ದಾರೆ ಎಂದು ಎಸ್ಐಟಿ ಆರೋಪಿಸಿದೆ.
ಅಲ್ಲದೇ ಈ ಕುರಿತು ಜಗದೀಶ್ ವಿರುದ್ಧ ಎಸ್ಐಟಿ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ದೂರನ್ನು ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಜಗದೀಶ್ ವಿನಾಕಾರಣ ಮೂಗು ತೂರಿಸುವ ಪ್ರಯತ್ನ ಮಾಡ್ತಿದ್ದಾರೆ. ಯುವತಿಯ ಪರ ವಕಾಲತ್ತು ಹಾಕಿರೋದು ಮಂಜು ಎಂಬುವವರು. ಆದರೆ, ಇವರು ವಕಾಲತ್ತು ಇಲ್ಲದಿದ್ದರೂ ಬಂದು ತನಿಖಾಧಿಕಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲಸ ಮಾಡುವ ಜಾಗದಲ್ಲಿ ಬಂದು ನಿಂತು ಸುಖಾಸುಮ್ಮನೆ ಕೂಗಾಟ ಮಾಡುವುದು. ಪದೇ ಪದೇ ಮಾಧ್ಯಮಗಳ ಮುಂದೆ ನಿಂತು ಎಸ್ಐಟಿಗೆ ನಿಂದನೆ ಮಾಡುವುದು. ಆರೋಪಿ ಬಂಧಿಸಿಲ್ಲ ಅಂತಾ ಪದೇ ಪದೇ ಹೇಳಿ ಒತ್ತಡ ಹಾಕುವುದನ್ನು ಜಗದೀಶ್ ಮಾಡುತ್ತಿದ್ದಾರೆ ಎಂದು ಎಸ್ಐಟಿ ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆ.ಎನ್.ಜಗದೀಶ್, ಸಂತ್ರಸ್ತೆ ಹೇಳಿದ್ರಿಂದಲೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ. ಹಾಗೇನಾದರೂ ಇದ್ದಲ್ಲಿ ಎಸ್ಐಟಿ ನನಗೆ ನೊಟೀಸ್ ನೀಡಲಿ, ನಾನು ಮಾಹಿತಿ ನೀಡುವುದನ್ನ ನಿಲ್ಲಿಸುತ್ತೇನೆ ಎಂದಿದ್ದಾರೆ.