ಸರ್ವಜನಾಂಗದ ಶಾಂತಿಯ ತೋಟ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯ ಆಡಳಿತದಲ್ಲಿ ಟಿಪ್ಪು ಛಾಯೆ ಎದ್ದು ಕಾಣುತ್ತದೆ: ರಾಜ್ಯ ಬಿಜೆಪಿ

tweet war
Published on

ಬೆಂಗಳೂರು: "ದ್ವೇಷದ ಬಜಾರ್‌ನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೆವೆಂದು ಸುಳ್ಳಿನಿಂದ ಶುರುವಾದ ಎಟಿಎಂ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಪ್ರತಿ ಕ್ಷಣದಿಂದಲೂ ದ್ವೇಷವೇ ನಮ್ಮ ತಂದೆ-ತಾಯಿ, ದ್ವೇಷವೇ ನಮ್ಮ ಬಂಧು-ಬಳಗ ಎನ್ನುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ​​ ಒಂದು ತಿಂಗಳು ಪೂರೈಸಿದೆ. ರಾಜ್ಯದ ಇತಿಹಾಸದಲ್ಲಿ ಕೇವಲ ಒಂದು ತಿಂಗಳಲ್ಲಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವುದು ಸಿದ್ದರಾಮಯ್ಯ ಅವರ ಸರ್ಕಾರದ ಏಕೈಕ ಸಾಧನೆ" ಎಂದು ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.

"ಬರದಿಂದ ಬಸವಳಿಯುತ್ತಿರುವ ರಾಜ್ಯದ ಜನತೆಗೆ, ಬೆಲೆಯೇರಿಕೆ ಬರೆಯನ್ನು ಎಳೆದಿರುವ ಈ ಸರ್ಕಾರ ತಾನು ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿಲ್ಲ. ಅಧಿಕಾರ ಹಿಡಿದ ಮೇಲೆ ಎಲ್ಲದಕ್ಕೂ ಕಂಡಿಷನ್ ಅಪ್ಲೈ ಎಂದು ಹೇಳುತ್ತಾ, ವರ್ಗಾವಣೆ ದಂಧೆಯಲ್ಲಿ ನಿರಂತರವಾಗಿ ಸಿದ್ದರಾಮಯ್ಯ ಅವರ ಸರ್ಕಾರ ತೊಡಗಿದೆ" ಎಂದು ಟ್ವೀಟ್​ ಮಾಡಿದೆ.

"ಕೇವಲ ಬಾಯಿಮಾತಿಗೆ ಸರ್ವಜನಾಂಗದ ಶಾಂತಿಯ ತೋಟ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಟಿಪ್ಪು ಛಾಯೆ ಎದ್ದು ಕಾಣುತ್ತದೆ. ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಮೂಲಕ ತಾವು ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಸಿದ್ದರಾಮಯ್ಯರವರ ಈ ತುಘಲಕ್ ಸರ್ಕಾರ ಸಾಬೀತುಪಡಿಸುತ್ತಿದೆ" ಎಂದು ಸರಣಿ ಟ್ವೀಟ್ ಮಾಡುವ ​​ಮೂಲಕ ಕಾಂಗ್ರೆಸ್​​ ಸರ್ಕಾರವನ್ನು ಟೀಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net