

ಮುಂಬೈ: ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಶಿಕ್ಷೆ ಏನು ಕೊಡುವಿರಿ ಎಂದು ಮುಂಬೈ ಪೊಲೀಸರಿಗೆ ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದಾನೆ.
ಹೀಗೆ ಪೊಲೀಸರಿಗೆ ಟ್ವೀಟ್ ಮಾಡಿದ್ದು ನೀಲೇಶ್ ಬೆಡೇಕರ್ (39) ಎಂಬಾತ. ಅದಕ್ಕೆ ಪೊಲೀಸರು ಆತನ ವಿಳಾಸ ಮೊಬೈಲ್ ಕೇಳಿದ್ದಾರೆ. ಆತ ತನ್ನ ಮೊಬೈಲ್ ನಂಬರ್ ನೀಡಿದ್ದಾನೆ.
ನೀಲೇಶ್ ಮಾಡಿದ ಟ್ವೀಟ್ನಲ್ಲಿ "ನೀವು ನನ್ನ ಜೀವನದಲ್ಲಿ ಏನು ಬದಲಾವಣೆ ಮಾಡುವಿರಿ. ನಾನು ಜೈಲಿನಲ್ಲಿರಬೇಕಾದ ಸಮಯವನ್ನು ಹೇಳಿ, ನಾನು ಆಕಸ್ಮಾತ್ ಸಾಯದಿದ್ದರೆ, ಅಲ್ಲಿಗೆ ಬರುತ್ತೇನೆ" ಎಂದಿ ಟ್ವೀಟ್ನಲ್ಲಿ ಕೆಂಪು ಬಾವುಟದ ಚಿತ್ರಗಳನ್ನು ಹಾಕಿದ್ದಾನೆ.
ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳವವರಿಗೆ ಗೌರ ಏಕಿಲ್ಲ? ಆದರೆ ಈ ಗೌರವ ಬೇಕು ಎಂದು ನಿಮಗನಿಸುವುದಿಲ್ಲವೇ? ಎಂದು ಪ್ರಶ್ನಿಸಿದ ಆತ, ನಾನು ಬದುಕಿ ಬಂದರೆ ನಾನು ಎಷ್ಟು ತಿಂಗಳು ಜೈಲಿನಲ್ಲಿರಬೇಕಾಗುತ್ತದೆ ಹೇಳಿ ಎಂದಿದ್ದಾನೆ.
ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುವ ಕಚೇರಿಯು ನೀಲೇಶ್ ಹತ್ತಿರದ ವನರೈ ಪೊಲಿಸ್ ಠಾಣೆಗೆ ಈ ಮಾಹಿತಿ ನೀಡಿದ್ದಾರೆ. ತಕ್ಷಣ ವನರೈ ಪ್ರದೇಶದ ಎಸ್ಪಿ ಮಹೇಶ್ ನಿವೇಟ್ಕರ್ ಸ್ಥಳಕ್ಕೆ ತೆರಳಿದ್ದಾರೆ.
ನೀಲೇಶ್ನನ್ನು ಭೇಟಿ ಮಾಡಿ ಆತನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ನಂತರ ಆತನೇ ಸಮೀಪದ ಆಸ್ಪತ್ರೆಗೆ ತೆರಳಿ ಕೆಲ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾನೆ.
ನೀಲೇಶ್ ಕೆಲ ವೈಯುಕ್ತಿಕ ಕಾರಣಗಳಿಂದ ಬೇಸತ್ತಿದ್ದಾನೆ. ಆದರಿಂದ ಆತ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿದ್ದ. ಆತನ ಕುಟುಂಬದವರನ್ನು ಸಂಪರ್ಕಿಸಿ ನೀಲೇಶ್ನನ್ನು ಕಳುಹಿಸಲಾಗಿದೆ ಎಂದು ಎಸ್ಐ ಮಹೇಶ್ ತಿಳಿಸಿದರು.
ಸಮಸ್ಯೆಗಳು ಜೀವನದ ಒಂದು ಭಾಗ. ಇದಕ್ಕೆ ಆತ್ಮಹತ್ಯೆಯಂತಹ ನಿರ್ಧಾರಗಳು ಪರಿಹಾರವಾಗಲಾರವು ಎಂದು ಮುಂಬೈ ಪೊಲೀಸ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)