

Cardiac arrest : 50 ವರ್ಷದ ಭೋಜ್ಪುರಿ ಮತ್ತು ಮರಾಠಿ ನಟ ಯೋಗೇಶ್ ಮಹಾಜನ್ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಧಾರಾವಾಹಿಯ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅವರು, ಹಠಾತ್ ಅಸ್ವಸ್ಥತೆಯಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಅವರ ಕುಟುಂಬದವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಮರಾಠಿ, ಹಿಂದಿ ಮತ್ತು ಭೋಜ್‌ಪುರಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಈ ಮೊದಲು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು. ಭಾನುವಾರ (ಜನವರಿ 19) ಯೋಗೇಶ್ ಮಹಾಜನ್ ಅವರಿಗೆ ಹೃದಯ ಸ್ತಂಭನ ಆಗಿದೆ. ಇಂದು ಅವರ ಅಂತ್ಯಸಂಸ್ಕಾರ ಮುಂಬೈನಲ್ಲಿ ನಡೆಯಲಿದೆ.
ಯೋಗೇಶ್ ಮಹಾಜನ್ ಅನೇಕ ಮರಾಠಿ ಚಲನಚಿತ್ರಗಳು ಮತ್ತು ಕೆಲವು ಹಿಂದಿ ಪೌರಾಣಿಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಶಿವ ಶಕ್ತಿ-ತಪ, ‘ತ್ಯಾಗ’, ‘ತಾಂಡವ್’, ‘ಆದಿ ಶಂಕರಾಚಾರ್ಯ’, ‘ಶ್ರೀಮದ್ ರಾಮಾಯಣ’ ರೀತಿಯ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು.
ಹಿಂದಿ ಧಾರಾವಾಹಿಯ ಶೂಟಿಂಗ್‌ಗಾಗಿ ಅವರು ಉಮರ್‌ಗಾಂವ್‌ಗೆ ಹೋಗಿದ್ದರು. ಧಾರಾವಾಹಿಯ ಶೂಟಿಂಗ್ ಮುಗಿಸಿದ್ದಾರೆ. ಈ ವೇಳೆ ಅವರಿಗೆ ದೇಹದಲ್ಲಿ ಏನೋ ವ್ಯತ್ಯಾಸ ಇದೆ ಎಂಬುದು ಗೊತ್ತಾಗಿದೆ. ವೈದ್ಯರ ಬಳಿ ಹೋಗಿ ಅವರು ಔಷಧ ತೆಗೆದುಕೊಂಡು ರಾತ್ರಿ ಹೋಟೆಲ್ನಲ್ಲಿ ಮಲಗಿದ್ದರು.ಬೆಳಿಗ್ಗೆ ಯೋಗೇಶ್ ಶೂಟಿಂಗ್‌ಗೆ ಸೆಟ್‌ಗೆ ಬಂದಿರಲಿಲ್ಲ. ಹೋಟೆಲ್ ಕೋಣೆಯ ಬಾಗಿಲು ತೆರೆದು ನೋಡಿದಾಗ ಅವರು ಉಸಿರಾಡುತ್ತಾ ಇರಲಿಲ್ಲ. ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು.