British: ನೈಋತ್ಯ ಟರ್ಕಿಯಲ್ಲಿರುವ ಮಾರ್ಮಾರಿಸ್ ಬಾರ್ನಲ್ಲಿ ಬಿಲ್ ವಿಷಯಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಬ್ರಿಟಿಷ್ ಪ್ರವಾಸಿಗರ ಗುಂಪಿನ ಮೇಲೆ ಅಲ್ಲಿನ ಬೌನ್ಸರ್ಸ್ಗಳು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಪಟ್ಟಂತೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರೈಲ್ವೆ ಸೌಲಭ್ಯಗಳಿಗಾಗಿ ಮನವಿ ಸಲ್ಲಿಕೆ
ವೈರಲ್ ಆಗಿರುವ ವೀಡಿಯೋದಲ್ಲಿ, ''ಇಬ್ಬರು ಮಹಿಳೆಯರು ಸೇರಿ ಒಬ್ಬ ಪುರುಷ ಕೂತಿದ್ದ ಟೇಬಲ್ ಬಳಿ ಬಿಲ್ ವಿಚಾರಕ್ಕೆ ಗಲಾಟೆ ನಡೆದಿದ್ದು, ಬಳಿಕ ಬಂದ 5 ಜನ ಬೌನ್ಸರ್ಸ್ಗಳು ಏಕಾಏಕಿ ಅವರ ಮೇಲೆ ದಾಳಿ ಮಾಡಿ, ಮನಬಂದಂತೆ ಹಲ್ಲೆ ಮಾಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ''.
ಮೊದಲಿಗೆ ಈ ಹೊಟೇಲ್ನಲ್ಲಿ ಬಿಲ್ ವಿಚಾರಕ್ಕೆ ಜಗಳ ಪ್ರಾರಂಭವಾಗಿ ನಂತರ ಇದು ಹಿಂಸಾಚಾರವಾಗಿ ಬದಲಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ. ಈ ದೃಶ್ಯಾವಳಿಗಳು ಗುಂಪಿನಲ್ಲಿದ್ದ ಪ್ರವಾಸಿಗನ ಮೇಲೆ ಬೌನ್ಸರ್‌ಗಳು ಹಲ್ಲೆ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ, ಗಲಾಟೆ ಬಿಡಿಸಲು ಬಂದ ಇಬ್ಬರ ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ.(ಏಜೆನ್ಸೀಸ್)