ತುಂಗಾ ಪ್ರವಾಹ ಇಳಿಮುಖ

sri-1 rain
ಶೃಂಗೇರಿ ತಾಲೂಕಿನ ಬೇಗಾರಿನ ಪಿಎಸಿಎಸ್ ಕಟ್ಟಡದ ಹಿಂಭಾಗದ ಧರೆ ಮಳೆಯಿಂದ ಕುಸಿಯುತ್ತಿದೆ.
Published on

ಶೃಂಗೇರಿ: ತಾಲೂಕಿನಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿದ್ದು ತುಂಗಾ ನದಿಯ ಪ್ರವಾಹ ಐದು ದಿನಗಳ ನಂತರ ಇಳಿಮುಖವಾಗಿದೆ. ಶನಿವಾರ ಪಟ್ಟಣದ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಶೃಂಗೇರಿ-91.0 ಮಿ.ಮಿ, ಕಿಗ್ಗಾ- 134.3 ಮಿ.ಮೀ, ಕೆರೆಕಟ್ಟೆ- 120.4 ಮಿ.ಮೀ. ಮಳೆಯಾಗಿದೆ
ಮಳೆ ಇಳಿಮುಖವಾಗಿದ್ದರೂ ಆಗಾಗ್ಗೆ ಜಡಿ ಮಳೆ ಮುಂದುವರಿದಿದ್ದು ವಿದ್ಯುತ್ ವ್ಯತ್ಯಯವಾಗುತ್ತಿದೆ. ದಿನವಿಡಿ ಮೋಡದ ವಾತಾವರಣವಿತ್ತು. ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಲವು ಕಡೆ ಮಳೆಯಿಂದ ತೋಟಗಳಲ್ಲಿನ ಮರಗಳು ಉರುಳಿವೆ. ಬೇಗಾರಿನಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂಭಾಗದಲ್ಲಿ ಧರೆ ಕುಸಿಯುತ್ತಿದ್ದು ಕಟ್ಟಡ ಹಾಗೂ ಕುಡಿಯುವ ನೀರಿನ ಬಾವಿಗೆ ಹಾನಿ ಸಂಭವಿಸಿದೆ. ಕಟ್ಟಡದ ಹಿಂಭಾಗ ಹರಿಯುವ ಹಳ್ಳಕ್ಕೆ ತಡೆಗೋಡೆ ಅಗತ್ಯವಾಗಿದ್ದು ಇದರಿಂದ ಮಾತ್ರ ಭೂಕುಸಿತ ತಡೆಯಲು ಸಾಧ್ಯ ಎಂದು ಬೇಗಾರ್ ಪಿಎಸಿಎಸ್ ಅಧ್ಯಕ್ಷ ಶಂಕರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net