ಐ.ಎಸ್.ಪ್ರಸಾದ್ ಗೆ ತುಮಕೂರು ವಿವಿ ಗೌರವ ಡಾಕ್ಟರೇಟ್ ಪ್ರದಾನ

VV_Convocation
Published on

ತುಮಕೂರು: ಬೆಂಗಳೂರಿನ ಹೆಸರಾಂತ ಚಾರ್ಟೆಡ್ ಅಕೌಂಟೆಂಟ್ ಐ.ಎಸ್.ಪ್ರಸಾದ್ ಗೆ ತುಮಕೂರು ವಿವಿ 14ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲ, ವಿವಿ ಕುಲಾಧಿಪತಿ ವಿ. ಆರ್.ವಾಲಾ ಪ್ರದಾನ ಮಾಡಿದರು.

ಇಂದು ನಡೆದ

ವಿವಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಈ ವೇಳೆ ಮೂವರಿಗೆ ಡಿ.ಲಿಟ್, 142 ಅಭ್ಯರ್ಥಿಗಳು ಪಿ.ಎಚ್ ಡಿ., ಪದವಿ ಪ್ರದಾನ ಮಾಡಲಾಯಿತು.

ಐ.ಎಸ್.ಪ್ರಸಾದ್ : 3 ದಶಕಗಳಿಂದ ಚಾರ್ಟೆಂಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಐ.ಎಸ್.ಪ್ರಸಾದ್ ಅವರು ಹೆಸರಾಂತ ಉದ್ಯಮಿ. ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜಸೇವೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net