ಬೆಳ್ಳಿರಥದಲ್ಲಿ ಬೆಳ್ದಿಂಗ್ಳಪ್ಪನ ಮೆರವಣಿಗೆ

Meravanige
Published on

ಕನ್ನಡ ನುಡಿಹಬ್ಬಕ್ಕೆ ಚಾಲನೆ

ತುಮಕೂರು: ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಲು ಕಾರಣಕರ್ತರು ಆದ ಜಿಲ್ಲೆಯವರೇ ಆದ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದ ಡಾ.ಅಗ್ರಹಾರ ಕೃಷ್ಣಮೂರ್ತಿ ಈ ಬಾರಿ ಕನ್ನಡ ತೇರು ಎಳೆದು 2 ದಿನಗಳ ನುಡಿಜಾತ್ರೆಗೆ ಚಾಲನೆ ನೀಡಿದರು.

ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷ ಡಾ.ಅಗ್ರಹಾರ ಕೃಷ್ಣಮೂರ್ತಿ ಮೆರವಣಿಗೆ ಬೆಳ್ಳಿರಥದಲ್ಲಿ ಅದ್ದೂರಿಯಾಗಿ ನಡೆಯಿತು. ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಮೆರವಣಿಗೆಗೆ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಚಾಲನೆ ನೀಡಿದರು. ಸಾಕಷ್ಟು ಮುಜಗರದಿಂದಲೇ ಕನ್ನಡ ರಥವನ್ನೇರಿದ ಅಗ್ರಹಾರ ಕೃಷ್ಣಮೂರ್ತಿ  ಮೆರವಣಿಗೆ ಬಿಜಿಎಸ್​ ವೃತ್ತದ ಮೂಲಕ ವಿವಿಧ ಕಲಾ ಪ್ರಕಾರದ ತಂಡಗಳೊಂದಿಗೆ ಎಂಜಿ ರಸ್ತೆ, ಗುಂಚಿಚೌಕ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಗಾಜಿನ ಮನೆವರೆಗೆ ಸಾಗಿತು. ಶಾಲಾ&ಕಾಲೇಜು ಮಕ್ಕಳು, ವಿವಿಧ ಸಂ&ಸಂಸ್ಥೆಗಳು ಮುಖ್ಯಸ್ಥರು, ಪದಾಧಿಕಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಕೋಲಾಟ, ನಂದಿಧ್ವಜ, ವೀರಗಾಸೆ, ಡೊಳ್ಳುಕುಣಿತ, ಸೋಮನಕುಣಿತ, ನಾಸಿಕ್​ ಡೋಲ್​, ನಾದಸ್ವರ, ಗಾರುಡಿಗೊಂಬೆ ನೃತ್ಯ ವೈಭವವು ಮೆರವಣಿಗೆಗೆ ಮೆರಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net