ನಿಮಗೆ ಯಾವುದೇ ಕಾರಣಕ್ಕೆ ಸಿಗುವುದಿಲ್ಲ... Food ವ್ಲಾಗರ್​ಗೆ ಟೀ ಕೊಡಲು ನಿರಾಕರಿಸಿದ ಯುವತಿ; ವೈರಲ್​ ವಿಡಿಯೋ ತಿಳಿಸುತ್ತದೆ ಅಸಲಿ ಕಾರಣ

Food Blogger
Published on

ವಾರಣಾಸಿ: ಇತ್ತೀಚಿನ ದಿನಗಳಲ್ಲಿ ಫುಡ್​ ವ್ಲಾಗರ್​ಗಳು (Food Vloggers) ಹೆಚ್ಚಾಗಿದ್ದು, ಪ್ರತಿನಿತ್ಯ ವಿವಿಧ ಆಹಾರ ಹಾಗೂ ಕಂಟೆಂಟ್​ಗಳ ಮೂಲಕ ಜನರಿಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ. ಆದರೆ, ಕೆಲವೊಮ್ಮೆ ಇವರ ಕೆಂಟೆಂಟ್​ಗಳಿಗೆ ಟೀಕೆಗಳು ವ್ಯಕ್ತವಾಗುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ವಾರಣಾಸಿಯಲ್ಲಿ ನಡೆದಿದೆ.

ವಾರಣಾಸಿಯ ಘಾಟ್​ನಲ್ಲಿ ಕಂಟೆಂಟ್​ ಕ್ರಿಯೇಟರ್​ಗಳಾದ ಅಂಕಿತ್​ ಕುಮಾರ್ ಹಾಗೂ ಕೈಸಾ ಓಲ್ಜಕ್ಕಾ ಎಂಬುವವರು ಫುಡ್​ ವ್ಲಾಗರ್​ಗಳ (Food Vloggers) ಕುರಿತಾದ ವಿಡಿಯೋ ಒಂದು ಹಂಚಿಕೊಂಡಿದ್ದು, ಈ ವಿಡಿಯೋ 50 ಮಿಲಿಯನ್​​ಗಿಂತಲೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. 

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಅಂಕಿತ್​ ಕುಮಾರ್​ ಯುವತಿಯ ಬಳಿ ಹೋಗಿ ಬನಾರಸ್​ ಘಾಟ್​ನಲ್ಲಿ ವಿದೇಶಿಯೊಬ್ಬರು ಚಹಾವನ್ನು ಮಾರುತ್ತಿದ್ದಾರೆ ಎಂದು ಹೇಳುತ್ತಾರೆ. ಬಳಿಕ ಅವರು ಮಾಡುವ ಚಹಾ ಹೇಗಿದೆ ನೋಡೋಣ ಬನ್ನಿ ಎಂದು ಹೇಳುತ್ತಾರೆ. ಬಳಿಕ ಒಂದು ಕಪ್​ ಚಹಾ ಕೊಡುವಂತೆ ಹೇಳಿ 10 ರೂಪಾಯಿ ಕೊಡುತ್ತಾರೆ.

ಅಂಕಿತ್​ ಕುಮಾರ್​​ರಿಂದ ಹಣ ಪಡೆದ ಬಳಿಕ ಆತ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಯುವತಿ ನೀವು ಫುಡ್​ ವ್ಲಾಗರ್​ಹಾ (Food Vloggers) ಎಂದು ಕೇಳುತ್ತಾಳೆ. ಅದಕ್ಕೆ ಯುವಕ ಹೌದು ಎಂದು ಹೇಳುತ್ತಾನೆ. ಬಳಿಕ ಆಕೆ 10 ರೂಪಾಯಿಯನ್ನು ವಾಪಸ್​ ಕೊಟ್ಟು ಚಹಾ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಯಾಕೆ ಎಂದು ಪ್ರಶ್ನಿಸಿದಾಗ ನೀವು ಫುಡ್​ ವ್ಲಾಗರ್​ಗಳು (Food Vloggers) ಕಂಟೆಂಟ್​ ಹೆಸರಿನಲ್ಲಿ ನಮ್ಮನ್ನು ಟೀಕಿಸಿ ಹಣ ಗಳಿಸುತ್ತಿದ್ದೀರಾ ಎಂದು ಯುವತಿ ಕಾರಣವನ್ನು ನೀಡಿದ್ದಾಳೆ.

ವಿದೇಶಿ ಇಂಡಿಯನ್​ ಪೇಜ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 50 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಹಲವರು ಇವರ ಕಂಟೆಂಟ್​ಅನ್ನು ಮೆಚ್ಚಿ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ. ಕೆಲವರು ಅದನ್ನು ಟೀಕಿಸಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net