ಗ್ರಾಮಗಳ ಸ್ವಚ್ಚತೆಯಷ್ಟೇ ಎನ್ಎಸ್ಎಸ್ ಶಿಬಿರದ ಉದ್ದೇಶವಲ್ಲ; ಜನರಲ್ಲಿ ಅರಿವು ಮೂಡಿಸಿ

NSS
Published on

ಹುಳಿಯಾರು: ರಾಷ್ಟ್ರೀಯ ಸೇವಾ ವಾರ್ಷಿಕ ಶಿಬಿರದಲ್ಲಿ ಶಿಬಿರಾರ್ಥಿಗಳು ಜನರಿಗೆ ಗ್ರಾಮೀಣಾಭಿವೃದ್ಧಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಪ್ರಾಚಾರ್ಯ ಪ್ರೊ.ಎಸ್​.ಸಿ.ವೀರಣ್ಣ ಹೇಳಿದರು.

ಸೋರಲಮಾವು ಗ್ರಾಮದಲ್ಲಿ ಹುಳಿಯಾರು&-ಕೆಂಕೆರೆ ಬಿಎಂಎಸ್​ ಸರ್ಕಾರಿ ಪದವಿ ಎನ್​ಎಸ್​ಎಸ್​ ಟಕದ ವತಿಯಿಂದ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ದೇವಾಲಯಕ್ಕೆ ನೀಡಿದ ಆದ್ಯತೆಯನ್ನು ಶಿಕ್ಷಣಕ್ಕೂ ನೀಡಬೇಕು ಎಂದರು.

ಸ್ವಚ್ಛತೆ, ನೀರಿನ ಸಂರಕ್ಷಣೆ, ಕೃಷಿ, ಆರೋಗ್ಯ, ಹೈನುಗಾರಿಕೆ ಸೇರಿಂದತೆ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾನುವಾರ ಬೆಳಗ್ಗೆ ನಡೆದ ಶಿಬಿರ ಧ್ವಜಾರೋಹಣವನ್ನು ಗ್ರಾಪಂ ಸದಸ್ಯ ಎಸ್​.ಎ.ಮಂಜುನಾಥ್​ ನೆರವೇರಿಸಿ ಮಾತನಾಡಿ, ಎನ್​ಎಸ್​ಎಸ್​ ವಿದ್ಯಾರ್ಥಿಗಳೆಂದರೆ ಊರಿನಲ್ಲಿ ಸ್ವಚ್ಛತೆ ಮಾಡಲು ಬರುವವರು ಎಂದು ತಿಳುವಳಿಗೆ ಇದೆ. ಆದರೆ, ಸ್ವಚ್ಚತೆಯೂ ಶ್ರಮದಾನದ ಭಾಗವಷ್ಟೇ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು ವಿದ್ಯಾರ್ಥಿಗಳ ಕೆಲಸವಾಗಬೇಕು ಎಂದರು.


ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮಚಂದ್ರಬೋವಿ, ಎನ್​ಎಸ್​ಎಸ್​ ಸಂಯೋಜನಾಧಿಕಾರಿ ಪ್ರೊ.ಮಲ್ಲಿಕಾರ್ಜುನ, ಡಾ.ಬಿ.ಜಯಶ್ರೀ, ಉಪನ್ಯಾಸಕ ಎಂ.ಕೆ.ತಿಪ್ಪೇಸ್ವಾಮಿ, ಬಿ.ಆರ್​.ಚಂದ್ರಹಾಸ, ಕೆ.ಜಯಪ್ರಕಾಶ, ಪಿ.ಹರೀಶ್​, ಎಸ್​ಡಿಎಂಸಿ ಅಧ್ಯಕ್ಷ ಶಿವಕುಮಾರ್​, ಸದಸ್ಯರಾದ ಎಸ್​.ಎ.ರಾಜೇಶಚಾರ್​, ಎಂ.ಮೋಹನ್​ಕುಮಾರ್​ , ಇಂದ್ರಕುಮಾರ್​,ಗ್ರಾಪಂ ಸದಸ್ಯೆ ಶಾರದಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net