ಶ್ರೇಯಾ ಘೋಷಾಲ್, ಸುನಿಧಿ ಚೌಹಾನ್ ಯಾರೂ ಅಲ್ಲ…ಇವರೇ ದೇಶದ ಶ್ರೀಮಂತ ಗಾಯಕಿ..!

tfinal
Published on

ಬಾಲಿವುಡ್​​ ಗಾಯಕಿಯರ ಸಂಭಾವನೆ ಯಾವುದೇ ನಟಿಯರಿಗೂ ಕಮ್ಮಿ ಇಲ್ಲ. ಶ್ರೀಮಂತ ಮಹಿಳಾ ಗಾಯಕಿಯರ ವಿಷಯಕ್ಕೆ ಬಂದರೆ, ಈ ಹಿರಿಯ ಗಾಯಕರಿಗಿಂತ ಯುವ ಗಾಯಕಿಯೊಬ್ಬರು ಮುಂದಿದ್ದಾರೆ. ಯುವ ಗಾಯಕಿಯರ ಪೈಕಿ ಅತ್ಯಂತ ಶ್ರೀಮಂತ ಗಾಯಕಿ ಎಂದು ಮತ್ತೊಬ್ಬ ಮಹಿಳೆ ಗುರುತಿಸಿಕೊಂಡಿದ್ದಾರೆ.


ಬಾಲಿವುಡ್​​​ನ ಯುವ ಗಾಯಕಿ ತುಳಸಿ ಕುಮಾರ್​, ಇದೀಗ ಬೇರೆಲ್ಲಾ ಗಾಯಕಿಯರನ್ನ ಹಿಂದಿಕ್ಕಿ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಗುರುತಿಸಲಾಗಿದೆ. ತುಳಸಿ ಕುಮಾರ್​​ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರ ಸಹೋದರಿ.


ಮಾಧ್ಯಮ ವರದಿಗಳ ಪ್ರಕಾರ, ತುಳಸಿ ಕುಮಾರ್​​​ ಅವರ ಆಸ್ತಿಯ ಮೌಲ್ಯ 2 ಬಿಲಿಯನ್​ ಎಂದು ಗುರುತಿಸಲಾಗಿದೆ. ತುಳಸಿ ಕುಮಾರ್ 2009 ರಲ್ಲಿ 'ಲವ್ ಹೋ ಜಾಯೆ' ಆಲ್ಬಂನೊಂದಿಗೆ ತುಳಸಿ ತಮ್ಮ ಗಾಯನ ವೃತ್ತಿಯನ್ನ ಪ್ರಾರಂಭಿಸಿದ್ದರು. ಇನ್ನು ಶ್ರೇಯಾ ಅವರ ಆಸ್ತಿಯ ವಿಚಾರವಾಗಿ ಹೇಳೋದಾದ್ರೆ, ಇವರ ನಿವ್ವಳ ಆಸ್ತಿ 185 ಕೋಟಿ ರೂ.ಯಾಗಿದ್ದು, 2 ನೇ ಸ್ಥಾನದಲ್ಲಿದ್ದಾರೆ.


ಸುನಿಧಿ ಚೌಹಾಣ್ 100 ಕೋಟಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ಆಶಾ ಭೋಂಸ್ಲೆ 80 ಕೋಟಿ ರೂಪಾಯಿಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.


ತುಳಸಿ ಕುಮಾರ್​​ ಅವರು ದಿವಂಗತ ಗಾಯಕ ಗುಲ್ಶನ್ ಕುಮಾರ್ ಅವರ ಪುತ್ರಿ. ಮಾಧ್ಯಮ ವರದಿಗಳ ಪ್ರಕಾರ, ತುಳಸಿ ಕುಮಾರ್ ಅವರ ನಿವ್ವಳ ಮೌಲ್ಯ ಸುಮಾರು 2 ಬಿಲಿಯನ್ (200 ಕೋಟಿ) ಎಂದು ಹೇಳಲಾಗುತ್ತದೆ, ಇದು ಶ್ರೇಯಾ ಘೋಷಾಲ್ ಮತ್ತು ಸುನಿಧಿ ಚೌಹಾನ್ ಅವರ ಒಟ್ಟು ಸಂಪತ್ತಿಗಿಂತ ಹೆಚ್ಚು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net